ಜೈಪುರ, 22ಅಕ್ಟೋಬರ್ :
ಆ್ಯಂಕರ್ : ಬಿಜೆಪಿ ಎರಡನೆ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಿರುವುದಕ್ಕೆ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅರಸ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇದುವರೆಗೂ ವಸುಂಧರಾ ಅವರಿಗೆ ಟಿಕೆಟ್ ನಿರಾಕರಣೆ ಮಾಡಬಹುದು ಎಂದೇ ಎಲ್ಲರೂ ಭಾವಿಸಿದ್ದರೂ ಆದರೆ ವರಿಷ್ಠರು ಅವರಿಗೆ ಝಲ್ರಾಪಟನ್ ಕ್ಷೇತ್ರದಿಂದ ಟಿಕೆಟ್ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.ತಮಗೆ ಟಿಕೆಟ್ ನೀಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ವಸುಂಧರಾ ಅವರು ಎಕ್ಸ್ ನಲ್ಲಿ ಅವರು ಮೋದಿ ಹಾಗೂ ನಡ್ಡಾ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನು ಝಲ್ರಾಪತನ್ನ ವಿಧಾನಸಭಾ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ ಒಟ್ಟಾಗಿ ನಾವು ದಾಖಲೆಯ ವಿಜಯವನ್ನು ದಾಖಲಿಸುತ್ತೇವೆ, ಜೈ-ಜೈ ರಾಜಸ್ಥಾನ! ಎಂದು ಅವರು ಪೋಸ್ಟ್ ಮಾಡಿದ್ದಾರೆ.
