ಚಾಮರಾಜನಗರ, 22ಅಕ್ಟೋಬರ್ :
ಆ್ಯಂಕರ್ :
ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದಲೂ ಒಬ್ಬ ಪ್ರತಿನಿಧಿ ಭಾಗಿಯಾಗುವ ಅವಕಾಶ ಕಲ್ಪಿಸಲಾಗಿದೆ. ಮುಂದಿನ ವರ್ಷ ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಬೀದಿ ಬದಿ ಟೀ ಅಂಗಡಿ ವ್ಯಾಪಾರಿ ಚಾಮರಾಜನಗರದ ಚಾಯ್ ವಾಲಾ ಸಮೀವುಲ್ಲಾ ಭಾಗಿಯಾಗಲಿದ್ದಾರೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪಿಎಂ ಸ್ವನಿಧಿ ಯೋಜನೆಯಲ್ಲಿ ಕಿರುಸಾಲ ಪಡೆದು ಮರುಪಾವತಿ ಮಾಡಿರುವವರ ಫಲಾನುಭವಿಯನ್ನು ಪರಿಗಣಿಸಲಾಗಿದೆ. ಮೊದಲ ಹಂತದಲ್ಲಿ 10 ಸಾವಿರ ಎರಡನೇ ಹಂತದಲ್ಲಿ 20 ಸಾವಿರ ಮೂರನೇ ಹಂತದಲ್ಲಿ 50 ಸಾವಿರ ಸಾಲದ ಸೌಲಭ್ಯ ಕೊಡಲಾಗುತ್ತದೆ. ಸಾಲ ಪಡೆದವರು ಮರುಪಾವತಿ ಮಾಡಿದರೇ ಅಷ್ಟೇ ಸಾಲ ಕೊಡುವುದು. ಆದರೆ ಸಾಲ ಪಡೆದು ಬಹುತೇಕ ಜನರು ಸಾಲ ಮರುಪಾವತಿಸುತ್ತಿಲ್ಲ.
