ಚೆನ್ನೈ, 27ಅಕ್ಟೋಬರ್ (ಹಿ.ಸ):
ಆ್ಯಂಕರ್ :ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿ ಕುತೂಹಲ ಕೆರಳಿಸುತ್ತಿದೆ. ಇಂದು ನಡೆಯಲಿರುವ 26ನೇ ಪಂದ್ಯದಲ್ಲಿ ಬಾಬರ್ ಅಝಂ ನಾಯಕತ್ವದ ಪಾಕಿಸ್ತಾನ ತಂಡ ಟೆಂಬಾ ಬವುಮಾ ಅವರ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಪಾಕ್ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು ಗೆದ್ದರಷ್ಟೆ ಉಳಿಗಾಲ. ಸೋತರೆ ಟೂರ್ನಿಯಿಂದ ಬಹುತೇಕ ಹೊರಬಿದ್ದಂತೆ. ಇತ್ತ ಆಫ್ರಿಕಾ ಇಂದು ಗೆದ್ದರೆ ಟೇಬಲ್ ಟಾಪರ್ ಆಗಲಿದೆ. ಭಾರತ ದ್ವಿತೀಯ ಸ್ಥಾನಕ್ಕೆ ಕುಸಿಯಲಿದೆ.
ಪಾಕ್ಗೆ ಹ್ಯಾಟ್ರಿಕ್ ಸೋಲು
ಪಾಕಿಸ್ತಾನ ತಂಡ ಆರಂಭದ ಎರಡು ಪಂದ್ಯ ಗೆದ್ದಿದ್ದು ಬಿಟ್ಟರೆ ನಂತರ ಆಡಿದ ಮೂರೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೋಲುಂಡಿರುವುದು ಬಾಬರ್ ನಾಯಕತ್ವಕ್ಕೆ ಕುತ್ತುಬಂದಿದೆ. ಪಾಕ್ ಆಟಗಾರರು ಸಾಕಷ್ಟು ಟೇಕೆಗಳಿಗೆ ಒಳಗಾಗಿದ್ದಾರೆ. ಹೀಗಾಗಿ ಇಂದು ಯಾವರೀತಿ ಪ್ರದರ್ಶನ ನೀಡುತ್ತಾರೆ ನೋಡಬೇಕು. ನಾಯಕ ಫಾರ್ಮ್ಗೆ ಬಂದರೂ ತಂಡಕ್ಕೆ ಯಾವುದೇ ರೀತಿಯ ಪ್ರಯೋಜನ ಆಗುತ್ತಿಲ್ಲ. ಬ್ಯಾಟರ್ಗಳು ಅಲ್ಪ ಮಟ್ಟದ ಕೊಡುಗೆ ನೀಡುತ್ತಿದ್ದಾರೆ. ಆದರೆ, ಬೌಲರ್ಗಳ ಪೈಕಿ ಶಾಹಿನ್ ಅಫ್ರಿದಿ ಬಿಟ್ಟರೆ ಮತ್ಯಾರು ಮಾರಕವಾಗುತ್ತಿಲ್ಲ.
ಹಿಂದೂಸ್ತಾನ್ ಸಮಾಚಾರ್
