ಕೋಲಾರ, ೨೦ ಅಕ್ಟೋಬರ್ (ಹಿ.ಸ) :
ಆ್ಯಂಕರ್ : ಮುಳಬಾಗಿಲು ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ೨೦೨೩-೨೪ನೇ ಸಾಲಿನ ವಿದ್ಯಾರ್ಥಿ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು. ಪ್ರಾರಂಭಿಕ ದಿನವಾದ ಶುಕ್ರವಾರ ವಿದ್ಯಾರ್ಥಿಗಳಿಗೆ ಕ್ರೀಡೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಕ್ರೀಡಾಕೂಟದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಕೆ.ವಿ.ವೆಂಕಟರೆಡ್ಡಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಬಿ.ಕೆ.ರಘು, ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳಾದ ಬಿ.ಕವಿತ, ಮಂಜುಳಾದೇವಿ, ವೇದಮೂರ್ತಿ, ಅಂಬರೀಶ್, ಕ್ರೀಡಾ ಸಲಹೆಗಾರ ಎನ್.ಮುನಿರಾಜು, ಉಪನ್ಯಾಸಕರುಗಳು, ಕಛೇರಿ ಸಿಬ್ಬಂದಿ ವರ್ಗದವರು, ಕಾರ್ಯಾಗಾರ ಸಿಬ್ಬಂದಿ ವರ್ಗದವರು ಮತ್ತು ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ಹಾಜರಿದ್ದರು.
ಚಿತ್ರ : ಮುಳಬಾಗಿಲು ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
