
ಮುಂಬೈ, 3 ಜನವರಿ(ಹಿ.ಸ):
ಆ್ಯಂಕರ್ :
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಮೂರನೇ ಮತ್ತು ಅಂತಿಮ ಏಕದಿನ ಮಹಿಳಾ ಕ್ರಿಕೆಟ್ ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಗೆಲುವು ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ, ಭಾರತದ ವಿರುದ್ಧ ೧೯೦ ರನ್ಗಳಿಂದ ಜಯ ಸಾಧಿಸಿತು. ಆಸ್ಟ್ರೇಲಿಯಾ ಆಟಗಾರ್ತಿಯರಾದ ಫೋಬೆ ಲಿಚ್ಫೀಲ್ಡ್ ೧೧೯ ರನ್ ಮತ್ತು ಅಲಿಸ್ಸಾ ಹೀಲಿ ೮೨ ರನ್ ಗಳಿಸಿ ಭಾರತಕ್ಕೆ ೩೩೯ ರನ್ಗಳ ಸವಾಲು ನೀಡಿದರು. ಇದರ ಬೆನ್ನತ್ತಿದ ಭಾರತ ೩೨.೪ ಓವರ್ಗಳಲ್ಲಿ ೧೪೮ ರನ್ಗಳಿಗೆ ಆಲ್ಔಟ್ ಆಯಿತು. ಮೂರು ಪಂದ್ಯಗಳ ಸರಣಿಯನ್ನು ೩-೦ ಅಂತರದಲ್ಲಿ ಆಸ್ಟ್ರೇಲಿಯಾ ಗೆದ್ದುಕೊಂಡಿದೆ.
ಹಿಂದೂಸ್ತಾನ್ ಸಮಾಚಾರ್
