
ರಾಯ್ ಪುರ, 30 ನವೆಂಬರ್ (ಹಿ.ಸ):
ಆ್ಯಂಕರ್ :
ನಾಳೆ ಶುಕ್ರವಾರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ 4ನೇ ಟಿ20 ಗೆ ಮುಂಚಿತವಾಗಿ ಟೀಮ್ ಇಂಡಿಯಾ ಆಟಗಾರರು ರಾಯ್ಪುರವನ್ನು ತಲುಪಿದ್ದಾರೆ. ಭಾರತೀಯ ಪಡೆ ಬುಧವಾರ ಸಂಜೆ ರಾಯ್ ಪುರ ವಿಮಾನ ನಿಲ್ದಾಣದಿಂದ ಹೊರನಡೆಯುತ್ತಿರುವುದು ಕಂಡುಬಂದಿದೆ. ಸ್ಟ್ಯಾಂಡ್-ಇನ್ ಕೋಚ್ ವಿವಿಎಸ್ ಲಕ್ಷ್ಮಣ್ ಅವರು ಮೊದಲು ವಿಮಾನ ನಿಲ್ದಾಣದಿಂದ ಬಂದರು. ನಂತರ ಭಾರತೀಯ ಆಟಗಾರರು ಆಗಮಿಸಿದರು. ರಾಯ್ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ 4ನೇ ಟಿ20 ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಸದ್ಯ 5 ಪಂದ್ಯಗಳ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ 2-1 ಮುನ್ನಡೆ ಸಾಧಿಸಿದೆ. ಮೊದಲೆರಡು ಪಂದ್ಯಗಳಲ್ಲಿ ಸೋತ ಆಸ್ಟ್ರೇಲಿಯಾ ಮೂರನೇ ಟಿ20ಯಲ್ಲಿ ಅದ್ಭುತ ರೀತಿಯಲ್ಲಿ ಪುಟಿದೆದ್ದಿತು. ಗ್ಲೆನ್ ಮ್ಯಾಕ್ಸ್ವೆಲ್ ಅಜೇಯ ಶತಕ ಗಳಿಸಿ ಆಸೀಸ್ 223 ರನ್ಗಳ ಗುರಿಯನ್ನು ಬೆನ್ನಟ್ಟಿತು. ಹೀಗಾಗಿ ನಾಲ್ಕನೇ ಪಂದ್ಯ ರೋಚಕತೆ ಸೃಷ್ಟಿಸಿದೆ.
ಹಿಂದೂಸ್ತಾನ್ ಸಮಾಚಾರ್
