ನವದೆಹಲಿ,18ನವೆಂಬರ್ (ಹಿ.ಸ):
ಆ್ಯಂಕರ್ :
ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ ಸದ್ಯ ಐಸಿಸಿ ಏಕದಿನ ವಿಶ್ವಕಪ್ 2023 ಫೈನಲ್ ಆಡಲು ಸಿದ್ದತೆ ನಡೆಸುತ್ತಿದೆ. ಭಾನುವಾರ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಬಹುನಿರೀಕ್ಷಿತ ಫೈನಲ್ ಕಾದಾಟ ನಡೆಯಲಿದೆ. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿರುವ ಟೀಮ್ ಇಂಡಿಯಾ ಈಗಾಗಲೇ ಆಹ್ಮದಾಬಾದ್ಗೆ ತಲುಪಿ ಅಭ್ಯಾಸ ಕೂಡ ಶುರುಮಾಡಿದೆ. ವಿಶ್ವಕಪ್ ಮುಕ್ತಾಯವಾಗುತ್ತಿದ್ದಂತೆ, ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಆಡಲಿದೆ.
ಕಾಂಗರೂ ಪಡೆಯ ವಿರುದ್ಧ ಭಾರತ ತವರಿನಲ್ಲಿ ಒಟ್ಟು ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಮೊದಲ ಸೆಮಿಫೈನಲ್ ಮುಗಿದ ಬೆನ್ನಲ್ಲೇ ಈ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಎರಡನೇ ಸೆಮಿಫೈನಲ್ ಕಳಿದರೂ ಬಿಸಿಸಿಐ ಆಯ್ಕೆ ಸಮಿತಿ 15 ಸದಸ್ಯರ ತಂಡವನ್ನು ಹೆಸರಿಸಿಲ್ಲ. ಹೀಗಾಗಿ ಇಂದು ಆಸೀಸ್ ವಿರುದ್ಧದ ಟಿ20 ಸರಣಿಗೆ ಅಜಿತ್ ಅಗರ್ಕರ್ ನೇತೃತ್ವದ ಸಮಿತಿ ಟೀಮ್ ಇಂಡಿಯಾವನ್ನು ಹೆಸರಿಸುವ ಸಾಧ್ಯತೆ ಇದೆ
ಹಿಂದೂಸ್ತಾನ್ ಸಮಾಚಾರ್
