ಮುಂಬೈ, 3 ಮೇ : ಆ್ಯಂಕರ್:ಹೈದರಾಬಾದ್ ನ ರಾಜೀವ್ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ಎದುರು ಸನ್ ರೈಸರ್ಸ್ ಹೈದರಾಬಾದ್ ತಂಡ ೧ ರನ್ನಿಂದ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ತಂಡ , ನಿತೀಶ್ ಕುಮಾರ್ ರೆಡ್ಡಿ ೭೬, ಟ್ರಾವಿಸ್ ಹೆಡ್ ೫೮ ಹಾಗೂ ಹೆನ್ರಿಚ್ ಕ್ಲಾಸೆನ್ ಅವರ ೪೨ ರನ್ ಗಳ ನೆರವಿನಿಂದ ನಿಗದಿತ ೨೦ನ ಓವರ್ಗಳಲ್ಲಿ ೩ ವಿಕೆಟ್ ಕಳೆದುಕೊಂಡು ೨೦೧ ರನ್ ಗಳಿಸಿತು.
ರಾಜಸ್ತಾನ ಪರ ಆವೇಶ್ ಖಾನ್ ೨, ಸಂದೀಪ್ ಶರ್ಮಾ ೧ ವಿಕೆಟ್ ಪಡೆದರು.
೨೦೨ ರನ್ಗಳ ಗುರಿ ಬೆನ್ನತ್ತಿದ ರಾಜಸ್ತಾನ ತಂಡ ೨೦ ಓವರ್ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೨೦೦ ರನ್ ಗಳಿಸುವುದರೊಂದಿಗೆ ಸೋಲೊಪ್ಪಿಕೊಂಡಿತು.
ರಾಜಸ್ತಾನ ಪರ ರಿಯಾನ್ ಪರಾಗ್ ೭೭ ಹಾಗೂ ಯಶಸ್ವಿ ಜೈಸ್ವಾಲ್ ೬೭ ರನ್ ಗಳಿಸಿದರು.
ಹೈದರಾಬಾದ್ ತಂಡದ ಪರ ಭುವೇಶ್ವರ್ ಕುಮಾರ್ ೩, ಪ್ಯಾಟ್ ಕಮಿನ್ಸ್ ಹಾಗೂ ಟಿ.ನಟರಾಜನ್ ತಲಾ ೨ ವಿಕೆಟ್ ಪಡೆದರು. ಸನ್ ರೈಸರ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಭುವನೇಶ್ವರ್ ಕುಮಾರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ಇಂದು ನಡೆಯುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ಇಂದು ರಾತ್ರಿ ೭:೩೦ಕ್ಕೆ ಆರಂಭವಾಗಲಿದೆ.
