ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಜಿಂಬಾಬ್ವೆ ವಿರುದ್ಧದ ಟಿ-೨೦ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದ್ದು, ಶುಭಮನ್ ಗಿಲ್ ತಂಡದ ನಾಯಕನ ಜಬಾಬ್ದಾರಿ ವಹಿಸಿದ್ದಾರೆ. ಜುಲೈ ೬ ರಿಂದ ೧೪ರವರೆಗೆ ಹರಾರೆ ಸ್ಪೋರ್ಟ್ಸ್ನಲ್ಲಿ ನಡೆಯುವ ಸರಣಿಯಲ್ಲಿ ಒಟ್ಟು ೫ ಪಂದ್ಯಗಳು ನಡೆಯಲಿವೆ.
BulletsIn
- ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ, ರಿಯಾನ್ ಪರಾಗ್ ಮತ್ತು ತುಷಾರ್ ದೇಶಪಾಂಡೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
- ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಜೈಸ್ವಾಲ್ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ.
- ರೋಹಿತ್ ಶರ್ಮಾ, ವಿರಾಟ್ ಕೋಹ್ಲಿ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜ ಹಾಗೂ ಜಸ್ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ.
- ಫೈನಲ್ ನಡೆಯುವ ೨೦೨೪ ರ ಪುರುಷರ ಟಿ-೨೦ ವಿಶ್ವಕಪ್ ಟೂರ್ನಿ ನಂತರ ಭಾರತದ ಜಿಂಬಾಬ್ವೆ ಪ್ರವಾಸ ನಡೆಯುವುದು.
- ಈ ಹಿಂದೆ ಭಾರತ ಮತ್ತು ಜಿಂಬಾಬ್ವೆ ತಂಡಗಳು ೨೦೧೦, ೨೦೧೫ ಮತ್ತು ೨೦೧೬ ರಲ್ಲಿ ಹೋರಾಡಿದ್ದುವು.
