ಐಸಿಸಿ ಪುರುಷರ ಟಿ-೨೦ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ತಂಡ ಒಮನ್ ವಿರುದ್ಧ ೮ ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಬಾಂಗ್ಲಾದೇಶವು ನೆದರ್ ಲ್ಯಾಂಡ್ ವಿರುದ್ಧ ೨೫ ರನ್ಗಳಿಂದ ಜಯ ಸಾಧಿಸಿದೆ, ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ತಮ್ಮ ಮುಂದಿನ ಹಂತದ ಆಸೆಗಳನ್ನು ಜೀವಂತವಾಗಿರಿಸಿದೆ.
BulletsIn
- ಇಂಗ್ಲೆಂಡ್ ತಂಡ ಒಮನ್ ತಂಡವನ್ನು ೮ ವಿಕೆಟ್‌ಗಳಿಂದ ಸೋಲಿಸಿದೆ.
- ಆಂಟಿಗುವಾದಲ್ಲಿ ನಡೆದ ಪಂದ್ಯದಲ್ಲಿ ಒಮನ್ ೪೭ ರನ್ಗಳಿಗೆ ಆಲೌಟ್.
- ಇಂಗ್ಲೆಂಡ್ ಕೇವಲ ೩.೧ ಓವರ್ಗಳಲ್ಲಿ ೨ ವಿಕೆಟ್‌ಗೆ ೫೦ ರನ್ಗಳಿಸಿ ಗೆಲುವು.
- ಈ ಗೆಲುವಿನೊಂದಿಗೆ ಇಂಗ್ಲೆಂಡ್ ೮ರ ಘಟ್ಟಕ್ಕೆ ಪ್ರವೇಶಿಸುವ ಆಸೆಯನ್ನು ಜೀವಂತವಿರಿಸಿದೆ.
- ಕಿಂಗ್ಸ್ಟೌನ್‌ನಲ್ಲಿ ಬಾಂಗ್ಲಾದೇಶ ೨೫ ರನ್ಗಳಿಂದ ನೆದರ್ ಲ್ಯಾಂಡ್ ತಂಡವನ್ನು ಸೋಲಿಸಿದೆ.
- ಬಾಂಗ್ಲಾದೇಶ ೨೦ ಓವರ್ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೧೫೯ ರನ್ಗಳಿಸಿತು.
- ನೆದರ್ ಲ್ಯಾಂಡ್ ೨೦ ಓವರ್ಗಳಲ್ಲಿ ೮ ವಿಕೆಟ್ ಕಳೆದುಕೊಂಡು ೧೩೪ ರನ್ಗಳಿಸಿದವು.
- ಪಪುವಾ ನ್ಯೂಗಿನಿಯಾ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವೆ ಪಂದ್ಯ ನಡೆಯುತ್ತಿದೆ.
- ರಾತ್ರಿ ೮ ಗಂಟೆಗೆ ಅಮೆರಿಕಾ ಮತ್ತು ಐರ್ಲ್ಯಾಂಡ್ ತಂಡಗಳ ಪಂದ್ಯ.
- ಅಮೆರಿಕಾಗೆ ೮ರ ಘಟ್ಟಕ್ಕೆ ತಲುಪಲು ಈ ಪಂದ್ಯ ಮಹತ್ವದ್ದಾಗಿದೆ.
