ಲುಸಾನ್, 20 ಡಿಸೆಂಬರ್(ಹಿ.ಸ):
ಆ್ಯಂಕರ್ :
ಭಾರತದ ತಾರಾ ಹಾಕಿ ಪಟುಗಳಾದ ಹಾರ್ದಿಕ್ ಸಿಂಗ್ ಹಾಗೂ ಸವಿತಾ ಪೂನಿಯಾ ಎಫ್ಐಎಚ್ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಹಿಳಾ ಹಾಕಿ ತಂಡದ ನಾಯಕಿ ಸವಿತಾ ಪೂನಿಯಾ ಶ್ರೇಷ್ಠ ಗೋಲ್ ಕೀಪರ್ ಪ್ರಶಸ್ತಿ ಪಡೆದಿದ್ದಾರೆ. ಇದು ಸವಿತಾಗೆ ಸತತ ಮೂರನೇ ಪ್ರಶಸ್ತಿ. ಇದೇ ವೇಳೆ ಹಾರ್ದಿಕ್ ಸಿಂಗ್ ಪುರುಷರ ವಿಭಾಗದಲ್ಲಿ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ
ಹಾಕಿ: ಭಾರತ ಪುರುಷರ ತಂಡಕ್ಕೆ ಹ್ಯಾಟ್ರಿಕ್ ಸೋಲು
ವೆಲೆನ್ಸಿಯಾ: ಭಾರತ ಪುರುಷರ ಹಾಕಿ ತಂಡ 5 ರಾಷ್ಟ್ರಗಳ ಹಾಕಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲನುಭವಿಸಿದೆ. ಆರಂಭಿಕ ಪಂದ್ಯಗಳಳ್ಲೊ ಸ್ಪೇನ್ ಹಾಗೂ ಬೆಲ್ಜಿಯಂ ವಿರುದ್ಧ ಪರಾಭವಗೊಂಡಿದ್ದ ಭಾರತಕ್ಕೆ ಮಂಗಳವಾರ ಜರ್ಮನಿ ವಿರುದ್ಧ 2-3 ಗೋಲುಗಳಿಂದ ಸೋಲು ಎದುರಾಯಿತು.
ಭಾರತದ ಪರ ಅಭಿಷೇಕ್(9ನೇ ನಿಮಿಷ), ಶಮ್ಸೇರ್ ಸಿಂಗ್(14ನೇ ನಿಮಿಷ) ಗೋಲು ಬಾರಿಸಿದರು. ಆರಂಭಿಕ ಕ್ಟಾರ್ಟರ್ನಲ್ಲೇ 2-0 ಮುನ್ನಡೆ ಸಾಧಿಸಿದ್ದರೂ ಬಳಿಕ ಪುಟಿದೆದ್ದ ಜರ್ಮನಿ 3 ಗೋಲು ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಭಾರತ ತಂಡ ಮುಂದಿನ ಪಂದ್ಯದಲ್ಲಿ ಬುಧವಾರವಫ್ರಾನ್ಸ್ ವಿರುದ್ಧ ಸೆಣಸಾಡಲಿದೆ.
ಹಿಂದೂಸ್ತಾನ್ ಸಮಾಚಾರ್
