• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > Regional > ಹಳಗನ್ನಡ ಪಠ್ಯಬೋಧನೆ ಬೇರಿಂದ ಅರಳುವ ಹೂವಿನಂತೆ : ಪ್ರೊ.ಎನ್.ಬೋರಲಿಂಗಯ್ಯ ಅಭಿಮತ
Regional

ಹಳಗನ್ನಡ ಪಠ್ಯಬೋಧನೆ ಬೇರಿಂದ ಅರಳುವ ಹೂವಿನಂತೆ : ಪ್ರೊ.ಎನ್.ಬೋರಲಿಂಗಯ್ಯ ಅಭಿಮತ

CliQ INDIA
Last updated: September 18, 2025 12:12 pm
CliQ INDIA
Share
2 Min Read
SHARE

ಕೋಲಾರ, ೧೭ ಸೆಪ್ಟೆಂಬರ್ (ಹಿ.ಸ) :

ಆ್ಯಂಕರ್ : ಕನ್ನಡ ಬೋಧಕರು ಹಳಗನ್ನಡ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ರಸಾಸ್ವಾದನೆ ಆಗುವಂತೆ ಬೋಧಿಸಿದರೆ ಬೇರುಗಳಿಂದ ಅರಳುವ ಹೂವಿನಂತೆ ಸುಗಂಧಭರಿತವಾಗಿರುತ್ತದೆ. ಹಾಗೆ ಮಾಡದೆ ಹಳಗನ್ನಡವನ್ನು ದೂರೀಕರಿಸಿದರೆ ಬೇರುಗಳನ್ನು ಕತ್ತರಿಸಿಕೊಂಡ ಮರಗಳಾಗಿ ಒಣಗಿಹೋಗುತ್ತೇವೆ ಎಂದು ಹಿರಿಯ ವಿದ್ವಾಂಸರೂ ದಾರಿದೀಪ ಶಿಕ್ಷಣ ಕೇಂದ್ರದ ಸಂಸ್ಥಾಪಕರೂ ಆದ ಪ್ರೊ.ಎನ್.ಬೋರಲಿಂಗಯ್ಯ ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನ ಕ್ರಿಸ್ತು ಜಯಂತಿ ಡೀಮ್ಡ್ ಯೂನಿವರ್ಸಿಟಿಯ ಕನ್ನಡ ವಿಭಾಗ ಹಾಗೂ ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಅಂತರ್ಜಾಲದ ಮೂಲಕ ಆಯೋಜಿಸಲಾಗಿದ್ದ “ಶಾಸ್ತ್ರೀಯ ಕನ್ನಡ ಪಠ್ಯಗಳ ವಾಚನ-ವ್ಯಾಖ್ಯಾನ-ಅನುಸಂಧಾನ” ಕುರಿತಾದ ೫ ದಿನಗಳ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಪೂರ್ವದ ಸಾಂಸ್ಕೃತಿಕಹೊನ್ನನ್ನು ತಮ್ಮ ಅಪಾರವಾದ ಪ್ರತಿಭೆಯ ಮೂಲಕ ಕಾಲಕ್ಕೆ ತಕ್ಕಂತೆ ಅನ್ವಯಿಸಿಕೊಂಡ ಪಂಪ, ಕುಮಾರವ್ಯಾಸ ಮೊದಲಾದವರು ಶಾಸ್ತ್ರೀಯ ಕನ್ನಡ ಪರಂಪರೆಯಲ್ಲಿ ಮೇರುಕವಿಗಳೆನಿಸಿದ್ದಾರೆ. ಇಂಥವರಿAದ ಸರ್ವಸ್ವವನ್ನೂ ಸ್ವೀಕರಿಸಿದ ಕುವೆಂಪು ಅಂಥವರು ಆಧುನಿಕ ಕನ್ನಡ ಸಂದರ್ಭದಲ್ಲಿ ಮಹಾಕವಿಯಾದರು. ಕನ್ನಡ ನೆಲದಿಂದ ಮಾತ್ರವಲ್ಲದೇ ಭಾರತೀಯ ಸಂಸ್ಕೃತಿಯಿAದ ಹಾಗೂ ವಿಶ್ವಮಟ್ಟದ ಸಾಹಿತ್ಯ-ಸಂಸ್ಕೃತಿಗಳಿ0ದ ಮಾಲ್ಯಯುತವಾದುದನ್ನು ತಮ್ಮದಾಗಿಸಿಕೊಂಡ ಕುವೆಂಪು ಅವರು ತಮ್ಮ ಎಲ್ಲಾ ಸಾಹಿತ್ಯಕೃತಿಗಳಲ್ಲೂ ಅದನ್ನು ಎರಕಹೊಯ್ದಿದ್ದಾರೆ ಎಂದು ತಿಳಿಸಿದರು.

ಕನ್ನಡ ಬೋಧಕರು ಹಳಗನ್ನಡ ಪಠ್ಯಗಳನ್ನು ಬೋಧಿಸಲು ಸಮರ್ಥವಾಗಿ ಸಿದ್ಧರಾಗಬೇಕು ಮತ್ತು ತರಗತಿಗಳಲ್ಲಿ ರಸವತ್ತಾಗಿ ಬೋಧಿಸುವ ಮೂಲಕ ಕನ್ನಡ ನಾಡಿನ ಮಕ್ಕಳ ಹೃದಯಗಳಲ್ಲಿ ರತ್ನಗಳಂತೆ ಹೊಳೆಯಿಸಬೇಕು, ಸುಸಂಸ್ಕೃತರನ್ನಾಗಿ ಮಾಡಬೇಕು. ಹಾಗೆ ಕನ್ನಡ ವಿವೇಕ ಪರಂಪರೆಯ ಬೆಳಗನ್ನು ಬೋಧಿಸುವವರೇ ನಿಜವಾದ ಮನುಷ್ಯರಾಗುತ್ತಾರೆ. ಇಂದು ಮಹಿಳೆಯರನ್ನು ಬೆತ್ತಲುಗೊಳಿಸುವ, ಅಮಾನುಷವಾಗಿ ಅತ್ಯಾಚಾರ ಮಾಡುವ ವಿಕೃತಿಗಳು ಮರೆಯುತ್ತಿರುವಾಗ ನಮ್ಮ ಶಾಸ್ತ್ರೀಯ ಕನ್ನಡದ ಪಠ್ಯಗಳಲ್ಲಿರುವ ವಿವೇಕದ ಮದ್ದನ್ನು ತಂದುಕೊಳ್ಳಬೇಕಿದೆ ಮತ್ತು ಮನುಷ್ಯರ ಮತಿಗೆ ನೀಡಿ ವಿವೇಕವನ್ನು ಬೆಳಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಕ್ರಿಸ್ತು ಜಯಂತಿ ಡೀಮ್ಡ್ ಯೂನಿವರ್ಸಿಟಿಯ ಸಹ ಕುಲಪತಿಗಳಾದ ಡಾ.ಫಾ.ಲಿಜೋ ಪಿ. ಥಾಮಸ್ ಅವರು ಆಶಯ ನುಡಿಗಳನ್ನಾಡಿದರು. ಕರಾಮುವಿ ಕನ್ನಡ ಪ್ರಾಧ್ಯಾಪಕರೂ ಪ್ರಸಿದ್ಧ ಗಮಕಿಗಳೂ ಆದ ಪ್ರೊ.ಜ್ಯೋತಿಶಂಕರ್ ಅವರು ಕನ್ನಡ ಶಾಸನ, ಪಂಪಭಾರತ, ಕುಮಾರವ್ಯಾಸಭಾರತ, ರಾಘವಾಂಕನ ಹರಿಶ್ಚಂದ್ರ ಕಾವ್ಯ, ಹರಿಹರ ವಿರಚಿತ ಕುಂಬಾರ ಗುಂಡಯ್ಯನ ರಗಳೆ, ಮುದ್ದಣನ ರಾಮಾಶ್ವಮೇಧ, ರತ್ನಾಕರವರ್ಣಿಯ ಭರತೇಶ ವೈಭವ ಕಾವ್ಯಗಳಿಂದ ಆಯ್ದ ಪದ್ಯಭಾಗಗಳನ್ನು ಗಮಕದಲ್ಲಿ ವಾಚನ ಮಾಡಿದರು.

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರಾದ ಪ್ರೊ.ನೀಲಗಿರಿ ಎಂ.ತಳವಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ಕ್ರಿಸ್ತು ಜಯಂತಿ ಡೀಮ್ಡ್ ಯೂನಿವರ್ಸಿಟಿಯ ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಸ್ವಾಗತಿಸಿದರು. ಕಾರ್ಯಾಗಾರದ ಸಂಯೋಜಕರಾದ ಡಾ.ಸೈಯದ್ ಮುಯಿನ್ ನಿರ್ವಹಿಸಿದರು.

ಕನ್ನಡ ಪ್ರಾಧ್ಯಾಪಕರಾದ ಪ್ರೊ. ಚಂದ್ರಶೇಖರ್ ಎನ್., ಡಾ.ರವಿಶಂಕರ್ ಎ.ಕೆ., ಡಾ.ಭೈರಪ್ಪ ಎಂ., ಡಾ.ಕಿರಣಕುಮಾರ್ ಹೆಚ್.ಜಿ. ಹಾಗೂ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಹಿರಿಯ-ಸಹ ಸಂಶೋಧಕರು ಉಪಸ್ಥಿತರಿದ್ದರು. ೨೫೦ಕ್ಕೂ ಹೆಚ್ಚು ಕನ್ನಡ ಅಧ್ಯಾಪಕರು ಹಾಗೂ ಸಂಶೋಧಕರು ಭಾಗವಹಿಸಿದ್ದರು.

ಚಿತ್ರ : ಬೆಂಗಳೂರಿನ ಕ್ರಿಸ್ತು ಜಯಂತಿ ಡೀಮ್ಡ್ ಯೂನಿವರ್ಸಿಟಿಯ ಕನ್ನಡ ವಿಭಾಗದಲ್ಲಿ ಆಯೋಜಿಸಲಾಗಿದ್ದ “ಶಾಸ್ತ್ರೀಯ ಕನ್ನಡ ಪಠ್ಯಗಳ ವಾಚನ-ವ್ಯಾಖ್ಯಾನ-ಅನುಸಂಧಾನ” ಕುರಿತಾದ ೫ ದಿನಗಳ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಪ್ರೊ.ಎನ್.ಬೋರಲಿಂಗಯ್ಯ ಉದ್ಘಾಟಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್

You Might Also Like

ಬೆಂಗಳೂರು ಸೇರಿ ಹಲವೆಡೆ ಹೆಚ್ಚಿದ ಚಳಿ
ರಾಜ್ಯಾದ್ಯಂತ ಗರಿಷ್ಠ ಉಷ್ಣಾಂಶ ಏರಿಕೆ, ಕರಾವಳಿ, ದಕ್ಷಿಣ ಒಳನಾಡಿನ ಕೆಲವೆಡೆ ಮಳೆ
ಐಶ್ವರ್ಯಾ ಮಹಾದೇವ್ ಕೆಪಿಸಿಸಿ ಸಾಮಾಜಿಕ ಮಾಧ್ಯಮ ವಿಭಾಗದ ಅಧ್ಯಕ್ಷರಾಗಿ ನೇಮಕ
ಮಧ್ಯಾಹ್ನ ೩ ಘಂಟೆಗೆ ಪ್ರೊ.ನರಹರಿ ಅಂತ್ಯಕ್ರಿಯೆ
ಹೊಸ ನ್ಯಾಯಬೆಲೆ ಅಂಗಡಿಗಳಿಗಾಗಿ ಅರ್ಜಿ ಆಹ್ವಾನ

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ಪಂಜಾಬ್ ಪ್ರವಾಹ : ಸಮಗ್ರ ಪರಿಹಾರ ಪ್ಯಾಕೇಜ್ ನೀಡುವಂತೆ ರಾಹುಲ್ ಗಾಂಧಿ ಒತ್ತಾಯ
Next Article ಏಷ್ಯಾ ಕಪ್ 2025 : ಸೂಪರ್ 4ಕ್ಕೆ ಪಾಕಿಸ್ತಾನ ಪ್ರವೇಶ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?