• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > Regional > ವೀರಶೈವ ಲಿಂಗಾಯತರಿಗೆ ದಾವಣಗೆರೆಯಿಂದ ಹೊಸ ದಿಕ್ಸೂಚಿ : ಬೊಮ್ಮಾಯಿ
Regional

ವೀರಶೈವ ಲಿಂಗಾಯತರಿಗೆ ದಾವಣಗೆರೆಯಿಂದ ಹೊಸ ದಿಕ್ಸೂಚಿ : ಬೊಮ್ಮಾಯಿ

CliQ INDIA
Last updated: July 23, 2025 9:31 am
CliQ INDIA
Share
3 Min Read
SHARE

ದಾವಣಗೆರೆ, 22 ಜುಲೈ (ಹಿ.ಸ.) :

ಆ್ಯಂಕರ್ : ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಗುರುಗಳು ಎಲ್ಲ ಭಕ್ತರು ಒಂದಾಗಬೇಕು, ಆಗ ನಮ್ಮನ್ನು ಯಾರು ತಡೆಯುವುದಿಲ್ಲ. ವೀರಶೈವ ಲಿಂಗಾಯತರಿಗೆ ದಾವಣಗೆರೆಯಿಂದ ಹೊಸ ದಿಕ್ಸೂಚಿ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ದಾವಣಗೆರೆಯ ಶ್ರೀ ಮದ್ ಅಭಿನವ ರೇಣುಕ‌ ಮಂದಿರದಲ್ಲಿ ಶ್ರೀ‌ ಜಗದ್ಗುರು ಪಂಚಪೀಠಾಧೀಶ್ವರರ ದಿವ್ಯಸಾನಿಧ್ಯದಲ್ಲಿ ಏರ್ಪಡಿಸಲಾದ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.

ನಾವೆಲ್ಲ ಬಹಳ ಸಂಕೀರ್ಣ ಕಾಲದಲ್ಲಿ ಇಲ್ಲಿ ಸೇರಿದ್ದೇವೆ. ನಮಗೆ ಬಹಳ ದೊಡ್ಡ ಇತಿಹಾಸ ಇದೆ. ಅಷ್ಟೆ ಗಟ್ಡಿಯಾದ ಭವಿಷ್ಯ ಇದೆ ಎಂದು ಹೇಳುತ್ತೇವೆ. ಚಿಂತನೆ ಮಾಡುವ ಕಾಲ ಇದೆ. ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವ ಕಾಲ ಇದಲ್ಲ. ವಿಚಾರ ಮಾಡಬೇಕು ನಮಗೆ ಬಹಳ ದೊಡ್ಡ ಇತಿಹಾಸದ ಜೊತೆಗೆ ಸಂಸ್ಕಾರ ಸಂಸ್ಕತಿ ಇದೆ. ನಮ್ಮದೇ ಆದ ಚಿಂತನೆಯಲ್ಲಿ ನಡೆಯುತ್ತೇವೆ. ಧರ್ಮ, ನ್ಯಾಯ ನೀತಿಯ ಚೌಕಟ್ಟಿನಲ್ಲಿ ನಮ್ಮ ಚಿಂತನೆ ಇರುತ್ತದೆ. ನಾವು ಯಾವ ಚೌವಕಟ್ಟಿನಲ್ಲಿ ಇದ್ದೇವೆ ಆ ಚೌಟಕ್ಟಿನಲ್ಲಿ ಜಗತ್ತು ಇಲ್ಲ. ನಾವು ಚೌಕಟ್ಟು ಮೀರಿ ಚಿಂತನೆ ಬದಲಾಯಿಸಬೇಕಾ ಅಥವ ಚಿಂತನೆಯ ಒಳಗೆ ಇರುವವರನ್ನು ಚೌಕಟ್ಟಿನ‌ ಒಳಗೆ ತರಬೇಕಾ ಎಂದು ಆಲೋಚಿಸಬೇಕು ಎಂದರು.

ರೇಣುಕಾಚಾರ್ಯರಿಂದ ಹಿಡಿದು ಬಸವೇಶ್ವರರ ವರೆಗೆ ಜ್ಞಾನ ಮತ್ತು ಧ್ಯಾನದಿಂದ ಪಡೆದುಕೊಂಡಿರುವ ಚಿಂತನೆ ಒರೆಗೆ ಹಚ್ಚುವ ಕಾಲ ಬಂದಿದೆ. ಸಮಾಜ ಮುನ್ನಡೆಸುವ ಶಕ್ತಿ ವೀರಶೈವ ಲಿಂಗಾಯತರಿಗಿದೆ ನಮ್ಮ ಚಿಂತನೆ ಮಾನವೀಯ ತಳಹದಿಯ ಮೇಲಿದೆ. ಗುರು ಮತ್ತು ವಿರಕ್ತರು ಬೇರೆ ಎನ್ನುವ ವಾದ ಬಿಟ್ಟು ಇಡಿ ಮಾನವ ಕುಲಕ್ಕೆ ನೇತೃತ್ವ ಕೊಡುವ ಸಮಯ ಬಂದಿದೆ. ಮಾನವ ಧರ್ಮಕ್ಕೆ ಜಯವಾಗಲಿ ಎಂದು ರೇಣುಕಾಚಾರ್ಯರು ಹೇಳಿದರು. ದಯವೇ ಧರ್ಮದ ಮೂಲವಯ್ಯ ಎಂದು ಬಸವಣ್ಣ ಹೇಳಿದರು. ಇದರಲ್ಲಿ ವ್ಯತ್ಯಾಸ ಏನಿದೆ. ಮಹಾಪುರುಷರು ಒಂದೇ ರೀತಿಯಿಂದ ಚಿಂತನೆ ಮಾಡಿದಾಗ ನಮ್ಮಲ್ಲಿ ಭಿನ್ನತೆ ಏಕೆ, ಇದರಿಂದ ಸಮಾಜದ ಮೇಲೆ ಧಾರ್ಮಿಕವಾಗಿ ಏನು ಪರಿಣಾಮ ಆಗುತ್ತಿದೆ ಎನ್ನುವ ಅರಿವು ನಮಗಿರಬೇಕು. ಅಂಗೈಯಲ್ಲಿ ಲಿಂಗ ಹಿಡಿದಾಗ ಎಲ್ಲ ಒಂದಾಗುತ್ತದೆ. ಪರಮ ಪೂಜ್ಯರು, ಸಿದ್ದಾಂತ ಸಿಖಾಮಣಿ, ಬಸವಾದಿ ಶರಣರು ಎಲ್ಲರೂ ಹೇಳುವುದು ಲಿಂಗದಲ್ಲಿ ಐಕ್ಯರಾಗುವುದು. ಯಾರೋ ನಮ್ಮ ನಡುವೆ ಭಿನ್ನಾಭಿಪ್ರಾಯ ಉಂಟು ಮಾಡಲು ಪ್ರಯತ್ನಸುತ್ತಿದ್ದಾರೆ ಎಂದರು.

ನಮ್ಮಲ್ಲಿ ಹೃದಯ ಶ್ರೀಮಂತಿಕೆ ಇದೆ. ಮೆದುಳು ಮತ್ತು ಹೃದಯ ಒಂದಾದಾಗ ಅದೇ ಅಮೃತ ಘಳಿಗೆ, ಚಿಂತನೆ ಮತ್ತು ಭಾವನೆ ಒಂದಾದಾಗ ಅದೇ ಅಮೃತ ಗಳಿಗೆ ಪಂಚಪೀಠಾಧೀಶರು ಇಂದು ಅಂತಹ ಅಮೃತ ಘಳಿಗೆಗೆ ನಾಂದಿ ಹಾಡಿದ್ದಾರೆ. ಗುರುಗಳು ಎಲ್ಲರೂ ಒಟ್ಟಾಗಿರುವುದು ನಮಗೆ ದೊಡ್ಡ ಸ್ಪೂರ್ತಿ ಶಕ್ತಿ. ನಾವೆಲ್ಲ ಒಂದಾಗಿ ನಡೆದರೆ ವೀರಶೈವ ಲಿಂಗಾಯತ ಅಷ್ಟೇ ಅಲ್ಲ ಇಡೀ ಭಾರತ ನಮ್ಮ ಜೊತೆಗೆ ನಡೆಯುತ್ತದೆ ಎಂದು ಹೇಳಿದರು.

ಗುರು ಮತ್ತು ಭಕ್ತರ ನಡುವೆ ಪ್ರೀತಿ ವಾತ್ಸಲ್ಯದ ಸಂಬಂಧ, ಉತ್ಕೃಷ್ಟವಾದ ಪ್ರೀತಿ ಅಂದರೆ ಯಾವುದೇ ಷರತ್ತಿಲ್ಲದ ಪ್ರೀತಿ , ಉತ್ಕೃಷ್ಟ ಪ್ರೀತಿ ಸಿಗಬೇಕಾದರೆ ಗುರುವಿನಲ್ಲಿ ನಮ್ಮನ್ನು ನಾವೇ ಅರ್ಪನೆ ಮಾಡಿಕೊಳಗಳಬೇಕು ಗರುವಿನಲ್ಲಿ ಲೀನವಾಗಬೇಕು. ಗುರುಗಳ ಮಾತಿನಲ್ಲಿ ನನಗೆ ಆ ವಾತ್ಸಲ್ಯ ಸಿಕ್ಕಿದೆ. ಬಸಣ್ಣ ಅಂತ‌ ಕರೆದಾಗ ನಾನು ಕರಗಿ ಹೋದೆ. ಗುರು ಮತ್ತು ಭಕ್ತರ ನಡುವೆ ಯಾವುದೆ ಹುದ್ದೆ ಅಧಿಕಾರ ಸಂಬಂಧ ಬರುವುದಿಲ್ಲ. ಕಾಲದ ಕರೆಯನ್ನು ಗಮನಿಸಿ ಪರಮಪೂಜ್ಯರು ಏನು ಕರೆ ಮಾಡಿದ್ದಾರೆ ಅದು ವಿಸ್ತರಣೆ ಆಗಬೇಕು. ಎಲ್ಲ ಗುರುಗಳು ಎಲ್ಲ ಭಕ್ತರು ಒಂದಾಗಬೇಕು ಅಗ ನಮ್ಮನ್ನು ಯಾರು ತಡೆಯುವುದಿಲ್ಲ. ನಮ್ಮ ಶಕ್ತಿಯ ಅರಿವು ನಮಗಿಲ್ಲ. ಶಕ್ತಿ ನಮ್ಮೊಳಗಡೆ ಇದೆ. ವೀರಶೈವ ಲಿಂಗಾಯತರಿಗೆ ದಾವಣಗೆರೆಯಿಂದ ಹೊಸ ದಿಕ್ಸೂಚಿ ಸಿಕ್ಕಿದೆ ಎಂದರು.

ನಮಗೆ ಜೀವನ ಪದ್ಸತಿ ಮನಸನ್ನು ನಿಯಂತ್ರಣ ಮಾಡಲು ಬೇಕು ಮತ್ತು ವೈಚಾರಿಕತೆಯೂ ಬೇಕು. ಇವೆರಡೂ ಒಂದಾದಾಗ ಇಡೀ ಸಮಾಜ ಹಾಗೂ ಮನುಕುಲಕ್ಕೆ ಒಳ್ಳೆಯದಾಗುತ್ತದೆ. ಮಾನವ ಧರ್ಮಕ್ಕೆ ಜಯವಾಗಬೇಕಾದರೆ ವೀರಶೈವ ಲಿಂಗಾಯತರು ಒಗ್ಗಟ್ಟು ಆಗಬೇಕು. ಒಳಪಂಗಡಗಳ ಬಗ್ಗೆ ಚರ್ಚೆ ಯಾಗುತ್ತದೆ. ವೃತ್ತಿ ಆಧಾರಿತ ಜಾತಿಗಳು ನಿರ್ಮಾಣ ಆಗಿವೆ. ನಮ್ಮ ತಳಹದಿ ಗಟ್ಟಿಯಾಗಬೇಕೆಂದರೆ ಸವಾಲುಗಳನ್ನು ಒಗ್ಗಟ್ಟಾಗಿ ಎದುರಿಸಬೇಕು. ಒಂದು ಕಾಲ ಇತ್ತು ದುಡ್ಡೆ ದೊಡ್ಡಪ್ಪ ಅಂತ ಇತ್ತು. ಬರುವ ದಿನಗಳಲ್ಲಿ ದುಡಿಮೆಯೇ ದೊಡ್ಡಪ್ಪ, ಯಾರಿಗೆ ದುಡಿಮೆ ಇದೆ ಅವರಿಗೆ ಬಡತನವಿಲ್ಲ. ದುಡಿಮೆ ಕಲಿಸುವ ಸಮಾಜ ಅಂದರೆ ವೀರಶೈವ ಲಿಂಗಾಯತ ಸಮಾಜ ಎಲ್ಲಿವರೆಗೂ ಮಾನವನಿಗೆ ದುಡಿಮೆ ಮಾಡುವ ವಿಚಾರ ಇದೆ. ಅಲ್ಲಿವರೆಗೂ ವೀರಶೈವ ಲಿಂಗಾಯತ ಸಮಾಜದ ಜೀವಂತವಾಗಿರುತ್ತದೆ. ಕಾಲಕ್ಕೆ ತಕ್ಕಂತೆ ಒಕ್ಕಟ್ಟಾಗಿ ಗುರುಗಳ ಮಾರ್ಗದರ್ಶನದಂತೆ ನಡೆದುಕೊಂಡು ಹೋಗುತ್ತೇವೆ. ಸೂರ್ಯ ಚಂದ್ರ ಇರುವವರೆಗೂ ವೀರಶೈವ ಲಿಂಗಾಯತ ಶಕ್ತಿ ನಿರಂತರವಾಗಿ ಇರುತ್ತದೆ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa

You Might Also Like

ಕಲ್ಲಿದ್ದಲು ಅನೀಲಿಕರಣ ಯೋಜನೆ ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ಮಂಡನೆ – ಪ್ರಹ್ಲಾದ್ ಜೋಶಿ
ಡಿ.೧೬ರಂದು ಬಾಲವಿಕಾಸ ಅಕಾಡೆಮಿ ಪ್ರಶಸ್ತಿಗಳ ಪ್ರದಾನ
ನಿಂತಿದ್ದ ಕಾರಿನಲ್ಲಿ ಬೆಂಕಿ ಅವಘಡ – Hindusthan Samachar Kannada
ಸುಳ್ಳು ಮತ್ತು ದ್ವೇಷದ ಸುದ್ದಿಗಳು ಜಿಡಿಪಿಗೆ ಮಾರಕ-ಸಿಎಂ
ಮೀನುಗಾರಿಕೆ ಇಲಾಖೆ ಸಲಕರಣೆ ಕಿಟ್ ಪಡೆಯಲು ಅರ್ಜಿ ಆಹ್ವಾನ

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ಆರ್‌ಎಸ್‌ಎಸ್ ಶತಮಾನೋತ್ಸವ : ಚರ್ಚೆಯಲ್ಲಿ ಡಾ. ಮೋಹನ್ ಭಾಗವತ್
Next Article ಚೀನಾದಿಂದ ಅಮೆರಿಕ ಸರ್ಕಾರಿ ಉದ್ಯೋಗಿಗೆ ತಡೆ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?