ಬೆಂಗಳೂರು,13ನವೆಂಬರ್ (ಹಿ.ಸ):
ಆ್ಯಂಕರ್ :ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕವಾಗಿರುವ ಬಿ.ವೈ.ವಿಜಯೇಂದ್ರ ಕುರಿತು ಯಾರೂ ಕೂಡ ಅಪಸ್ವರ ಎತ್ತಬಾರದೆಂದು ಕೇಂದ್ರ ಬಿಜೆಪಿ ನಾಯಕರು ಸ್ಥಳೀಯ ನಾಯಕರಿಗೆ ಕಟ್ಟಪ್ಪಣೆ ವಿಧಿಸಿದ್ದಾರೆ. ವಿಜಯೇಂದ್ರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾದ ನಂತರ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಕೆಲ ಹಿರಿಯರು ಬಹಿರಂಗವಾಗಿ ಮಾತನಾಡದಿದ್ದರೂ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು.
ಕೆಲವರಂತೂ ಕನಿಷ್ಟ ಪಕ್ಷ ವಿಜಯೇಂದ್ರಗೆ ಶುಭಾಷಯವನ್ನು ಹೇಳದೆ ಅಂತರ ಕಾಪಾಡಿಕೊಂಡಿದ್ದರು. ಇದು ಮತ್ತೊಂದು ರೀತಯ ಭಿನ್ನಮತಕ್ಕೆ ದಾರಿ ಕಲ್ಪಿಸಲಿದೆ ಎಂಬುದನ್ನು ಅರಿತಿರುವ ಕೇಂದ್ರ ವರಿಷ್ಠರು ಪಕ್ಷದ ತೀರ್ಮಾನವನ್ನು ಯಾರೊಬ್ಬರೂ ಪ್ರಶ್ನಿಸುವಂತಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಸೂಚಿಸಿದರು.
ಹಿಂದೂಸ್ತಾನ್ ಸಮಾಚಾರ್
