ವಿಜಯಪುರ, 20 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬಿಡಿ ಬಿಡಿಯಾಗಿ ವಸತಿಯನ್ನು ಟ್ರಾನ್ಸ್ ಜೆಂಡರ್‌ಗಳಿಗೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ನವ ಸ್ಪೂರ್ತಿ ಸಂಘದಿಂದ ಪ್ರತಿಭಟನೆ ನಡೆಯಿತು.
ಪ್ರಧಾನ ಮಂತ್ರಿ ಆವಾಸ ಯೋಜನೆ ನಗರ ವಸತಿಯಲ್ಲಿನ ಮನೆಗಳನ್ನು
ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಬಿಡಿ ಬಿಡಿಯಾಗಿ ವಿಜಯಪುರ ಮಹಾನಗರ ಪಾಲಿಕೆ ಹಂಚಿಕೆ ಮಾಡಬೇಕು. ಇದರಿಂದ ಟ್ರಾನ್ಸ್ ಜೆಂಡರ್‌ಗೆ ನ್ಯಾಯ ಸಿಗುತ್ತದೆ. ಇನ್ನು ಒಂದೆ ಕಡೆಗೆ ಮನೆಗಳನ್ನು ಹಂಚಿಕೆ ಮಾಡಿದ್ರೇ ಹಿಜ್ರಾ, ಜೋಗಪ್ಪ, ಚಕ್ಕಾ ಈ ತರಹ ಕಾಲೋನಿ ಎಂದು ನಾಮಕರಣ ಮಾಡಲಾಗುತ್ತದೆ. ಅದಕ್ಕಾಗಿ ಬಿಡಿ ಬಿಡಿಯಾಗಿ ವಿಂಗಡಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande
