

ಕೊಪ್ಪಳ, 18 ನವೆಂಬರ್ (ಹಿ.ಸ.) :
ಆ್ಯಂಕರ್ : ನಗರಕ್ಕೆ ಹೊಂದಿಕೊ0ಡು ೧೦.೫ ಎಂಟಿಪಿಎಸ್ ಸಾಮರ್ಥ್ಯದ ಕಾರ್ಖಾನೆ ವಿಸ್ತರಣೆ ಮಾಡಲು ಮುಂದಾದ ಬಲ್ಡೋಟ ಬಿಎಸ್ಪಿಎಲ್ ಮತ್ತು ಇತರೆ ಕಾರ್ಖಾನೆಗಳ ವಿರೋಧಿ ಧರಣಿ ಸತ್ಯಾಗ್ರಹದ ೧೮ನೇ ದಿನದ ಹೋರಾಟ ಬೆಂಬಲಿಸಿ ಗದುಗಿನ ತೋಂಟದ ಸಿದ್ದಲಿಂಗ ಮಠದ ಶ್ರೀ ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳವರು ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಾಧಿತ ಪ್ರದೇಶದ ಹಲವು ಗ್ರಾಮಗಳ ದುಸ್ತಿತಿ ನೋಡಿ, ಅಲ್ಲಿನ ಜನರ, ರೈತರ ಮತ್ತು ಮಕ್ಕಳ ಜೊತೆ ಮಾತನಾಡಿ ತಮ್ಮ ಅನುಭವ ಹಂಚಿಕೊ0ಡರು.
ಅಲ್ಲಿ ಬೇರೆಯದ್ದೇ ಒಂದು ಲೋಕ ಸೃಷ್ಟಿ ಆಗಿದೆ ಅಲ್ಲಿನ ಹಳ್ಳಿಗಳನ್ನೇ ಬೇರೆಡೆ ಶಿಫ್ಟ್ ಮಾಡುವಷ್ಟು ತೊಂದರೆ ಇದೆ, ೨೦ ವರ್ಷ ಅವರು ಅನುಭವಿಸಿದ ನೋವಿಗೆ ಯಾವ ಮುಲಾಮು ಇಲ್ಲ, ಆದ್ದರಿಂದ ಈ ಕಾರ್ಖಾನೆ ಇಲ್ಲಿ ಅವಶ್ಯಕವೂ ಇಲ್ಲವಾದ್ದರಿಂದ ಈ ಹೋರಾಟ ಒಂದು ಬೃಹತ್ ಜನಾಂದೋಲವಾಗಬೇಕು ಅದಕ್ಕಗಿ ಉತ್ತರ ಕರ್ನಾಟಕದಲ್ಲಿ ಹೋರಾಟವನ್ನು ವಿಸ್ತರಿಸಲು ಬೇಕಾದ ವ್ಯವಸ್ಥೆ ಅನುಕೂಳ ಮಡಿಕೊಡುವ ಜೊತೆಗೆ ರಾಜ್ಯದ ನೂರಾರು ಮಠಾದೀಶರು ಇದಕ್ಕೆ ಬೇಕಾದರೆ ತಾವು ಕರೆದುಕೊಂಡು ಬರುವ ಆಶ್ವಾಸನೆ ನೀಡಿದರು.
ಗವಿಮಠದ ಪೂಜ್ಯರು ಇಲ್ಲಿನ ಅತ್ಯಂತ ಪ್ರಭವಿ ಮತ್ತು ಜ್ಞಾನಿಗಳು, ಜನರ ನೋವು ಅರಿತವರು, ಅವರನ್ನೇ ಮುಂದು ಮಾಡಿ ಹೋರಾಟ ಯಶಸ್ವಿಗೊಳಿಸಲು ನಾವು ಸಹ ಅನೇಕ ಮಠಾದೀಶರ ಜೊತೆಗೆ ಭೇಟಿ ಮಾಡಿ ಮುಂದಾಳತ್ವವಹಿಸಿಕೊಳ್ಳುವ0ತೆ ಬಿನ್ನವಿಸಿಕೊಳ್ಳುವದಾಗಿ ಹೇಳಿದರು. ಹೋರಾಟಕ್ಕೆ ಜನರು ತಂಡೋಪತ,0ಡವಾಗಿ ಬರಬೇಕು ಎಂದರು.
ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಕೊಪ್ಪಳ ಇದರ ಜಂಟಿ ಕ್ರಿಯಾ ವೇದಿಕೆ ಮೂಲಕ ನಡೆಯುತ್ತಿರುವ ಹೋರಾಟಕ್ಕೆ ಈಗಾಗಲೇ ಅನೇಕ ಸಂಘಟನೆಗಳು ಬೆಂಬಲ ನೀಡಿವೆ, ೧೮ನೇ ದಿನ ಕೊಪ್ಪಳ ಜಿಲ್ಲಾ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಸದಸ್ಯರು ಬೆಂಬಲ ನೀಡಿದರು. ಇಂದು ತೋಂಟದ ಸ್ವಾಮೀಜಿಯವರು ಬಂದು ಅದಕ್ಕೆ ಮತ್ತೊಂದು ತಿರುವು ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್
