ತುಮಕೂರು, 15 ಜನವರಿ(ಹಿ.ಸ):
ಆ್ಯಂಕರ್ :
ಸಂಕ್ರಾಂತಿ ಹಬ್ಬದ ಸಂಭ್ರಮದ ನಡುವೆ ತುಮಕೂರಿನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕಾರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ . ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕುಂಟೇಗೌಡನಹಳ್ಳಿ ಗೇಟ್ ಬಳಿ ಕಾರಿಗೆ ಪಂಚರ್ ಹಾಕುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನ ಆವಲಹಳ್ಳಿ ನಿವಾಸಿಗಳಾದ ಮಹೇಶ್(40), ಉಮೇಶ್(40) ಮೃತ ದುರ್ದೈವಿಗಳು.
ತುಮಕೂರು ಕಡೆಯಿಂದ ಶಿರಾಗೆ ಹೋಗುತ್ತಿರುವಾಗ ಘಟನೆ ಸಂಭವಿಸಿದೆ. ಕಾರು ಟೈರ್ ಪಂಚರ್ ಆಗಿತ್ತು. ಪಂಚರ್ ಹಾಕುತ್ತಿರುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಸಾವು ಸಂಭವಿಸಿದೆ. ಬೆಂಗಳೂರಿನ ಆವಲಹಳ್ಳಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆಸಿದೆ.
ಹಿಂದೂಸ್ತಾನ್ ಸಮಾಚಾರ್
