
ಬೆಂಗಳೂರು, 8 ಡಿಸೆಂಬರ್(ಹಿ.ಸ):
ಆ್ಯಂಕರ್ :
ನಾಳೆಯಿಂದ ಡಿ.13ರವರೆಗೆ ಬಸವನಗುಡಿಯ ದೊಡ್ಡ ಬಸವಣ್ಣ, ದೊಡ್ಡ ಗಣಪತಿ ದೇವಸ್ಥಾನದಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ನಡೆಯಲಿದೆ. ಕಡಲೆಕಾಯಿ ಪರಿಷೆಗೆ ಸಿಲಿಕಾನ್ ಸಿಟಿ ಜನರು ಸೇರಿದಂತೆ ಸುತ್ತಮುತ್ತಲ ಲಕ್ಷಾಂತರ ಜನರು ಆಗಮಿಸುತ್ತಾರೆ. ಹಾಗಾಗಿ ಬೆಂಗಳೂರಿನ ಬಸವನಗುಡಿ ವ್ಯಾಪ್ತಿಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಮತ್ತು ಪಾರ್ಕಿಂಗ್ಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಪರ್ಯಾಯ ಮಾರ್ಗಗಳು ಹೀಗಿವೆ
ಲಾಲ್ಬಾಗ್ ವೆಸ್ಟ್ಗೇಟ್ ಕಡೆಯಿಂದ ವಾಣಿವಿಲಾಸ ರಸ್ತೆ ಮೂಲಕ 5ನೇ ಮುಖ್ಯರಸ್ತೆ ಚಾಮರಾಜಪೇಟೆ, ಗಾಂಧಿಬಜಾರ್ ಮುಖ್ಯರಸ್ತೆಯಿಂದ ಬುಲ್ಟೆಂಪಲ್ ರಸ್ತೆಯ ರಾಮಕೃಷ್ಣಾಶ್ರಮ ವೃತ್ತದಲ್ಲಿ ಬಲತಿರುವು ಪಡೆಯಬೇಕು. ಹಯವದನರಾವ್ ರಸ್ತೆ ಮೂಲಕ ಗವಿಪುರಂ 3ನೇ ಅಡ್ಡರಸ್ತೆ ಮೂಲಕ ಮೌಂಟ್ಜಾಯ್ ಮೂಲಕ ಹನುಮಂತನಗರದ ಕಡೆ ತೆರಳಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್
