• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > Regional > ತಿಪ್ಪಣ್ಣನವರಿಗೆ ಅಕ್ಷರ ನಮನ – Hindusthan Samachar Kannada
Regional

ತಿಪ್ಪಣ್ಣನವರಿಗೆ ಅಕ್ಷರ ನಮನ – Hindusthan Samachar Kannada

CliQ INDIA
Last updated: July 11, 2025 9:15 pm
CliQ INDIA
Share
4 Min Read
SHARE

ಬಳ್ಳಾರಿ, 11 ಜುಲೈ (ಹಿ.ಸ.) :

ಆ್ಯಂಕರ್ : ಎನ್. ತಿಪ್ಫಣ್ಣರವರು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ತುರುವನೂರು ಗ್ರಾಮದ ಶರಣ ದಂಪತಿಗಳಾದ ಶ್ರೀರುದ್ರಣ್ಣ ಮತ್ತು ಶ್ರೀಮತಿ ಹಂಪಮ್ಮ ಇವರ ಪ್ರೀತಿಯ ಕಂದನಾಗಿ ೧೯೨೮ ರ ನವೆಂಬರ್ ಮಾಹೆಯಲ್ಲಿ ಜನಿಸಿದರು. ಶ್ರೀಯುತರು ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ತುರುವನೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ, ಪ್ರೌಡ ಶಿಕ್ಶಣವನ್ನು ಚಿತ್ರದುರ್ಗದಲ್ಲಿ, ಇಂಟರ್ ಮೀಡಿಯಟ್ ಶಿಕ್ಷಣವನ್ನು ದಾವಣಗೆರೆಯಲ್ಲಿ, ಬಿ.ಎ ಪದವಿಯನ್ನು ಮೈಸೂರಿನ ಮಹಾರಾಜ ಕಾಲೇಜನಲ್ಲಿ ಮುಗಿಸಿ,ಎಲ್.ಎಲ್.ಬಿ ಪದವಿಯನ್ನು ಬೆಂಗಳೂರಿನ ಬಿ.ಎಲ್ ಸರ್ಕಾರಿ ಕಾಲೇಜಿನಿಂದ ಪಡೆದುಕೊಂಡರು.ತೀ.ನಂ.ಶ್ರೀ, ಎಲ್. ಬಸವರಾಜು, ಡಾ.ಎಸ್. ಶ್ರೀ ಕಂಠಶಾಸ್ತ್ರಿಗಳು ಕುವೆಂಪು, ಎಸ್.ವಿ ಪರಮೇಶ್ವರ ಭಟ್ಟ, ಎಂ.ವಿ. ಸೀತಾರಾಮಯ್ಯ, ಎಲ್. ಬಸವರಾಜು, ಎಂ.ವಿ. ಕೃಷ್ಣರಾವ್, ಪಿ.ಎಲ್. ಡಿಸೋಜ, ಡಾ.ಸಿ.ಆರ್ ರೆಡ್ಡಿ ಮುಂತಾದ ವಿದ್ವಾಂಸರ ಮಾರ್ಗದರ್ಶನದಲ್ಲಿ ಬೆಳೆದ ಶ್ರೀಯುತರಿಗೆ ಸಾಹಿತ್ಯ ಶಿಕ್ಷಣ ಸಮಾಜ ಸೇವೆ ವಚನ ಸಾಹಿತ್ಯ ಕಾನೂನು ಈ ಕ್ಷೇತ್ರದಲ್ಲಿಸಹಜವಾಗಿಯೇ ಆಸಕ್ತಿ ಮೂಡಿತು.

ವ್ರತ್ತಿ ಮತ್ತು ಸಾಧನೆ

ವಕೀಲ ವೃತ್ತಿಯನ್ನು ಆರಿಸಿಕೊಂಡ ಶ್ರೀಯುತರು ಬಳ್ಳಾರಿಯಲ್ಲಿ ಸೇವೆ ಪ್ರಾರಂಭಿಸಿದರು. ೧೦ ವರ್ಷಗಳ ಕಾಲ ಪ್ರಾಸಿಕ್ಯೂಟರ್ ಆಗಿ, ನಂತರ ಸರ್ಕಾರಿ ಫ್ಲೀಡರ್ ಆಗಿ ಸೇವೆ ಸಲ್ಲಿಸಿದರು ಶ್ರೀ. ಆರ್.ಜಿ ದೇಸಾಯಿಯವರು ಸೆಷೆನ್ಸ್ ನ್ಯಾಯದೀಶರಾಗಿದ್ದಾಗ ಅವರಿಗೆ ವೈಟ್ ಗ್ಲೋಸ್(ಬಿಳಿಯ ಕೈಗವಸು) ಸಮರ್ಪಿಸುವ ಗೌರವಕ್ಕೆ ಪಾತ್ರರಾದರು.೧೯೮೨ ರಲ್ಲಿ ತಿಪ್ಪಣ್ಣನವರು ಬಾರ್ ಕೌನ್ಸಿಲ್ ಅಧ್ಯಕ್ಶರಾದರು. ವಕೀಲರ ಕಲ್ಯಾಣ ನಿಧಿಯನ್ನು ಸ್ಥಾಪಿಸಿದರು. ಸಮಾಜದ ದುರ್ಬಲ ವರ್ಗದವರ ಉಚಿತ ಕಾನೂನು ನೆರವಿಗೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ರಚಿಸಿದರು. ಎನ್. ತಿಪಣ್ಣನವರು ಕೇಂದ್ರ ವಾರ್ತಾ ಇಲಾಖೆಯ ಎಫ಼್.ಸಿ.ಎ.ಟಿ (ಫ಼ಿಲ್ಮ್ ಸೆನ್ಸರ್ ಅಪ್ಪಲೈಟ್ ಟ್ರಿಬುನಲ್) ಸಧಸ್ಯರಾಗಿ ಸೇವೆ ಸಲ್ಲಿಸಿದರು. ಅಮೃತಸರದ ಸುವರ್ಣ ಮಂದಿರದ ಮೇಲೆ ನಡೆದ ‘ಆಪರೇಶನ್ ಬ್ಲೂಸ್ಟಾರ್’ ದಾಳಿಯನ್ನಾದರಿಸಿದ ಪಂಜಾಬ್ ವೀಡಿಯೋ ಚಿತ್ರದ ಬಗ್ಗೆ ಬರೆದ ತೀರ್ಮಾನ ಸುಪ್ರೀಮ್ ಕೋರ್ಟ್ ನ್ಯಾಯಧೀಶರ ಪ್ರಶಂಸೆಗೆ ಪಾತ್ರವಾಯಿತು.

ಶ್ರೀಯುತರ ರಾಜಕೀಯ ಸೇವೆ

೯೦ ರ ದಶಕದಲ್ಲಿ ರಾಜಕೀಯ ಪ್ರವೇಶಿಸಿ ವಿಧಾನಸಭಾ ಲೋಕಸಭಾ ಚುನಾವಾಣೆಗಳಲ್ಲಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದರು. ನಂತರ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ೧೨ ವರ್ಷ ಸೇವೆ ಸಲ್ಲಿಸಿದರು. ಪರಿಷತ್ತಿನ ಲೆಕ್ಕಪತ್ರ ಸಮಿತಿ, ಕಂದಾಯ ಉಪ ಸಮಿತಿ ಅಧ್ಯಕ್ಷರಾಗಿ, ಅರಣ್ಯ ಮತ್ತು ಪರಿಸರ ಸಮಿತಿಗಳ ಅಧ್ಯಕ್ಷರಾಗಿ ಕೆಲಸ ಮಾಡಿದರು. ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ಉಪನಾಯಕರಾಗಿಯೂ ,,ಕನ್ನಡ ವಿಶ್ವವಿದ್ಯಾಲಯ ಹಂಪಿ ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು

ವೀರಶೈವ ವಿದ್ಯಾವರ್ಧಕ ಸಂಘದ ಸೇವೆ

ವೀ.ವಿ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶಾಲಾ ಕಾಲೇಜು ಆಡಳಿತ ಮಂಡಳಿಯ ಅದ್ಯಕ್ಷರಾಗಿ ಕಾರ್ಯದರ್ಶಿಯಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ, ವೀ ವಿ ಸಂಘದ ಕಾರ್ಯದರ್ಶಿಯಾಗಿದ್ದ ಕಾಲಾವಧಿಯಲ್ಲಿ ಬಳ್ಳಾರಿ ನಗರದಲ್ಲಿ ಮಾತ್ರ ವಿದ್ಯಾಸಂಸ್ಥೆಗಳಿದ್ದವು.ನಂತರ ಇವರು, ವೀ ವಿ ಸಂಘದ ಅಧ್ಯಕ್ಷರಾಗಿದ್ದ ಶ್ರೀ ಅಲ್ಲಂ ಕರಿಬಸಪ್ಪ ಇವರ ಸಹಕಾರದೊಂದಿಗೆ ಮುನಿರಾಬಾದ್ ನಲ್ಲಿ ಒಂದು ಹೈಸ್ಕೂಲು, ಹೊಸಪೇಟೆಯಲ್ಲಿ ವಿಜಯನಗರ ಕಾಲೇಜು ಪ್ರಾರಂಭಿಸಿದರು. ಅದರ ಉದ್ಘಾಟನೆಗೆ ಅಂದಿನ ಉಪರಾಷ್ತ್ರಪತಿ ಶ್ರೀಝಾಕಿರ್ ಹುಸೇನ್ ಮತ್ತು ಅಧ್ಯಕ್ಷತೆಗೆ ಶಿಕ್ಷಣ ಸಚಿವ ಎಸ್.ಆರ್ ಕಂಠಿಯರವರನ್ನು ಆಹ್ವಾನಿಸಿದ್ದರು,ಕೊಟ್ಟೂರಿನಲ್ಲಿ ಕೊಟ್ಟುರೇಶ್ವರ ಕಾಲೇಜನ್ನು ಪ್ರಾರಂಭಿಸಿದರು. ಹಗರಿಬೊಮ್ಮನಹಳ್ಳಿ ‌ ತಾಲೂಕಿನ ತಂಬ್ರಹಳ್ಳಿಯಲ್ಲಿ ಪ್ರೌಢಶಾಲೆಯನ್ನು ಪ್ರಾರಂಸಿಧರು. ಹೂವಿನ ಹಡಗಲಿಯಲ್ಲಿ ರಾಜ್ಯಪಾಲ ಧರ್ಮವೀರ ಅವರಿಂದ ಗಂಗಾವತಿ ಭಾಗ್ಯಮ್ಮ ರೂರಲ್ ಕಾಲೇಜ್ ಪ್ರಾರಂಭಿಸಿದರು.. ಈ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಎ.ಎಸ್ ಅಡಿಕೆಯವರು ವಹಿಸಿದ್ದರು. ಬಳ್ಳಾರಿಯಲ್ಲಿ ಕೊಟ್ಟೂರು ಸ್ವಾಮಿ ಶಿಕ್ಷಣ ಮಹಾವಿದ್ಯಾಲಯ ಪ್ರಾರಂಬಿಸಿದ ಕೀರ್ತಿ ಇವರದ್ದಾಗಿದೆ, ಕರ್ನಾಟಕ ವಿಶ್ವವಿದ್ಯಾಲಯವು ಕಾನೂನು ಕಾಲೇಜುಗಳ ಸ್ಥಾಪನೆಗೆ ಸಂಬಂದಿಸಿದಂತೆ ಲೋಕಲ್ ಇನ್ಸ್ಟಿಟ್ಯೂಟ್ ಕಮಿಟಿ ಆಫ಼್ ಲಾ ಕಾಲೇಜಸ್ ಎಂಬ ಸಮಿತಿಗೆ ಅಧ್ಯಕ್ಶರಾಗಿದ್ದಾಗ ಸಿರ್ಸಿ, ರಾಯಚೂರು, ಬೀದರ್, ಬಾಗಲ್ ಕೋಟೆ ಮತ್ತು ಅನೇಕ ಕಡೆ ಕಾನೂನು ಕಾಲೇಜುಗಳನ್ನು ಸ್ಠಾಪಿಸಲು ಅನುಮತಿ ಕೊಟ್ಟರು.ಇದರಿಂದಾಗಿ ಬಳ್ಳಾರಿಯಲ್ಲಿ ವುಂಕಿ ಸಣ್ಣರುದ್ರಪ್ಪ ಕಾನೂನು ಕಾಲೇಜನ್ನು ಪ್ರಾರಂಭಿಸಿದರು. ಆ ಕಾಲೇಜಿನಲ್ಲಿ ಗೌರವ ಉಪನ್ಯಾಸಾಕರಾಗಿ,ಸೇವೆ ಸಲ್ಲಿಸಿದರು. ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಕಾಲೇಜನ್ನು ಬಳ್ಳಾರಿಯಲ್ಲಿ ಸ್ಥಾಪಿಸಿದರು. ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲನ್ನು ಸ್ಠಾಪಿಸಿದರು. ಬಳ್ಳಾರಿಯಲ್ಲಿ ಇಂಜಿನಿಯರಿಂಗ್ ಕಾಲೇಜನ್ನು ಸ್ಠಾಪಿಸಿದರು. ಎಂ.ಬಿ.ಎ‌ ಕೋರ್ಸ್, ಪಾಲಿಟೆಕ್ನಿಕ್ ಹೊಸಪೇಟೆಯಲ್ಲಿ ಪ್ರೌಢದೇವರಾಯ ಇಂಜಿನಿಯರಿಂಗ್ ಕಾಲೇಜು ಹೀಗೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಬಿಸಿದ ಕೀರ್ತಿ ಶ್ರೀಯುತರಾದ್ದಾಗಿತ್ತು.

ತಿಪ್ಪಣ್ಣ ಎಂಬ ಬಹುಮುಖಿ ವ್ಯಕ್ತಿತ್ವ

ಶ್ರೀಯುತರದು ಬಹುಮುಖಿ ವ್ಯಕ್ತಿತ್ವ ಅವರು ಕೇವಲ‌ ವ್ಯಕ್ತಿಯಾಗಿರಲಿಲ್ಲ ವೀರಶೈವ ಸಮಾಜದ ಒಂದು ಶಕ್ತಿಆಗಿದ್ದರು, ಅಖಿಲ ಭಾರತ ವೀರಶೈವ ಮಹಾಸಭಾವನ್ನು ಕಟ್ಟಿ ಬೆಳೆಸಿವಲ್ಲಿ ಅವರ ಪಾತ್ರ ಹಿರಿದಾದದ್ದು, ರಾಷ್ಟ್ರದ್ಯಕ್ಷರಾಗಿ ಸಲ್ಲಿಸಿದ ಸೇವೆ ಅನುಪಮ‌, ಶರಣ ಸಾಹಿತ್ಯ ಕುರಿತು ಸಾವಿರಾರು ಕಾರ್ಯಕ್ರಮಗಳನ್ನು ಚಿಂತನಾಗೋಷ್ಠಿಗಳನ್ನು ಆಯೋಜಿದ್ದರು, ತಿಪ್ಪಣ್ಣನವರ ೭೭ನೇ ಹುಟ್ಟು ಹಬ್ಬದ ಸಮಾರಂಭದಲ್ಲಿ ಗೆಳೆಯರು ಮತ್ತು ಹಿತೈಷಿಗಳ ಶುಭ ಹಾರೈಕೆಯೊಂದಿಗೆ ಬೃಹತ್ ಸಮಾರಂಭ ಬಳ್ಳಾರಿಯಲ್ಲಿ ಜರಗಿತ್ತು ಅದರಲ್ಲಿ ಡಾ. ಮಲ್ಲಿಕಾರ್ಜುನ್ ಮನ್ಸೂರ್ , ಆರ್.ಸಿ. ಹಿರೇಮಠ್, ಡಾ. ಎಂ.ಎಂ ಕಲಬುರ್ಗಿ, ಜಸ್ಟೀಸ್ ಶ್ರೀಧರ್ ರಾವ್, ಜಸ್ಟೀಸ್ ಮಂಜುಳ ಚಲ್ಲೂರ್,ಮುಂತಾದ ಗಣ್ಯರು ಶ್ರೀ ದೇವೇಗೌಡರು,ಶ್ರೀ ಎಂ.ಪಿ ಪ್ರಕಾಶ್, ಶ್ರೀ ಸಿಧ್ದರಾಮಯ್ಯ ಮುಂತಾದ ರಾಜಕೀಯ ಮುತ್ಸದ್ದಿಗಳು ಆಗಮಿಸಿದ್ದರು, ಆ ಸಮಾರಂಭದಲ್ಲಿ ಶ್ರೀ ಯುತರಿಗೆಅಮೃತ ಶ್ರೀ ಎಂಬ ಅಭಿನಂದನಾ ಗ್ರಂಥವನ್ನು ಸಮರ್ಪಿಸಲಾಯಿತು.

ಭಾಪೂರ್ಣ ನಮನ

ಶಿಕ್ಷಣ ರಾಜಕೀಯ ಅಧ್ಯಾತ್ಮ ಸಾಹಿತ್ಯ ಕಾನೂನು ಮುಂತಾದ ಕ್ಷೇತ್ರಗಳಲ್ಲಿ ನಿಸ್ಪೃಹ ಸೇವೆ ಸಲ್ಲಿಸಿ ಸಮಾಜಮುಖಿಯಾಗಿ ಬಾಳಿ, ಬದುಕಿನ ಸಾರ್ಥಕತೆಯನ್ನು ಮೆರೆದರು ಇತರರಿಗೆ ಆದರ್ಶ ಪ್ರಾಯರಾದರು.ಶತಾಯುಷಿಗಳಾಗುವ ಹೊಸ್ತಿಲಲ್ಲಿದ್ದ ಅವರು ಇಂದು ಕಾಲನ ಕರೆಗೆ ಓಗೊಟ್ಟು, ಇಹ ಲೋಕದ ಯಾತ್ರೆಯನ್ನು ಮುಗಿಸಿದರು. ಅವರ ಅಗಲಿಕೆಯು ನಮ್ಮೆಲ್ಲರಿಗೂ ನೋವಿನ ಸಂಗತಿಯಾಗಿದೆ,ಅವರು ದೈಹಿಕವಾಗಿ ದೂರವಾಗಿದ್ದರೂ, ಅವರು ಸಮಾಜಕ್ಕೆ ಸಲ್ಲಿಸಿದ ಸೇವೆಯಿಂದ ಚಿರಸ್ಮರಣೀಯರಾಗಿದ್ದಾರೆ.

ಹಿರಿಯ ಚೇತನಕ್ಕೆ ಭಾವಪೂರ್ಣ ನಮನ

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

You Might Also Like

ರವಿವಾರದ ರಾಶಿ ಭವಿಷ್ಯ – Hindusthan Samachar Kannada
ಆರೋಗ್ಯ ಇಲಾಖೆಯಿಂದ ಜಾಗೃತಿ – Hindusthan Samachar Kannada
ಧರ್ಮಸ್ಥಳ ಪ್ರಕರಣ : ಅನಗತ್ಯ ಹೇಳಿಕೆ ಬೇಡ-ಯು.ಟಿ.ಖಾದರ್
ರೈತರಿಗೆ ಬಂಡಿಪುರ ಹುಲಿ ಮೀಸಲು ಪ್ರದೇಶ ಹಸ್ತಾಂತರಿಸಬೇಕು : ಜೋಸೆಫ್ ಹೂವರ್
ಸಂಘ-ಸಂಸ್ಥೆಗಳಿಗೆ ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನ

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ಕ್ಯಾಪ್ಸ್ ಕೆಫೆಯಲ್ಲಿ ಗುಂಡಿನ ದಾಳಿ : ಕಪಿಲ್ ಶರ್ಮಾ ತಂಡದ ಪ್ರತಿಕ್ರಿಯೆ
Next Article ಪ್ರಧಾನಿ ಮೋದಿಯಿಂದ ನಾಳೆ ನೇಮಕಾತಿ ಪತ್ರ ವಿತರಣೆ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?