ಕಾಂಗ್ರೆಸ್ ಮುಖಂಡ ಶ್ರೀನಿವಾಸನ್ ಕೊಲೆ ಖಂಡಿಸಿ ಶ್ರೀನಿವಾಸಪುರ ದಲ್ಲಿ ಬಂದ್ ಆಚರಣೆ
ಕೋಲಾರ / ಅಕ್ಟೋಬರ್ ೩೧ (ಹಿ.ಸ) ಆಂಕರ್ : ಕಾಂಗ್ರೆಸ್ ಮುಖಂಡ ಶ್ರೀನಿವಾಸನ್ ಕೊಲೆಯ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಕರೆಯ ಮೇರೆಗೆ ಶ್ರೀನಿವಾಸಪುರ ಪಟ್ಟಣದಲ್ಲಿ ಬಂದ್ ಆಚರಿಸಲಾಯಿತು. ಶ್ರೀನಿವಾಸಪುರ ಪಟ್ಟಣದಲ್ಲಿ ಅಂಗಡಿ, ಹೋಟೆಲ್ ಸೇರಿದಂತೆ ವಾಣಿಜ್ಯ ವಹಿವಾಟು ಸ್ಥಗತಿಗೊಂಡಿತ್ತು. ಆಟೋ ರಿಕ್ಷಾಗಳು, ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿತು.. ರಸ್ತೆಗಳು ನಿರ್ಜನವಾಗಿದ್ದವು, ಜನ ಜೀವನ ಅಸ್ತವ್ಯಸ್ಥಗೊಂಡಿತ್ತು. ಶ್ರೀನಿವಾಸಪುರ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸರ್ಕಾರಿ ಕಛೇರಿಗಳು ಯಾವುದೇ ಬ್ಯಾಂಕ್ಗಳು ಕಾರ್ಯ ನಿರ್ವಹಿಸಲಿಲ್ಲ.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸನ್ ರವರನ್ನು ಕಳೆದ ಅಕ್ಟೋಬರ್ ೨೩ರಂದು ಆರು ಮಂದಿ ಹಂತಕರು ಇರಿದು ಕೊಲೆ ಮಾಡಿದ್ದರು. ಶ್ರೀನಿವಾಸ್ ಮತ್ತು ಅವರ ದಾಯಾದಿ ವೇಣುಗೋಪಾಲ ನಡುವಿನ ವೈಷಮ್ಯ ಕೊಲೆಗೆ ಕಾರಣವಾಗಿತ್ತು. ಪ್ರಮುಖ ಆರೋಪಿ ವೇಣುಗೋಪಾಲ್ ಕೊಲೆಗೆ ಸಂಚು ನಡೆಸಿದ್ದ. ತನ್ನ ಸಹಚರರೊಂದಿಗೆ ಶ್ರೀನಿವಾಸನ್ ನಿರ್ಮಿಸುತ್ತಿದ್ದ ಬಾರ್ ಕಟ್ಟಡದ ಬಳಿ ಕೊಚ್ಚಿ ಕೊಲೆ ಮಾಡಿದ್ದರು ಎಂದು ಪೊಲೀಸರು ಎಫ್.ಐ.ಆರ್. ದಾಖಲಿಸಿದ್ದರು. ಈ ಪ್ರಕರಣ ರಾಜಕೀಯವಾಗಿ ಸಂಚಲನ ಸೃಷ್ಠಿ ಮಾಡಿತ್ತು. ಸ್ವತಃ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಕೋಲಾರಕ್ಕೆ ಭೇಟಿ ನೀಡಿ ಶ್ರೀನಿವಾಸನ್ ಕೊಲೆ ಹಂತಕರ ಪತ್ತೆಗೆ ಪೊಲೀಸ್ ತಂಡಗಳನ್ನು ರಚನೆ ಮಾಡುವಂತೆ ಸೂಚಿಸಿದ್ದರು.
ಪೊಲೀಸರು ರಚಿಸಲಾಗಿದ್ದ ತಂಡಗಳ ಅಧಿಕಾರಿಗಳು ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳಿಗೆ ಮರಣದಂಢನೆ ನೀಡಬೇಕೆಂದು ಬಂದ್ ಆಚರಿಸಲಾಗುತ್ತಿದೆ..ಪೊಲೀಸರು ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.
ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ, ವಿಚಾರಣೆ ನಡೆಸಿ ಆರೋಪ ಸಾಬೀತಾದರೆ ಶಿಕ್ಷೆಯನ್ನು ನ್ಯಾಯಾಲಯದಲ್ಲಿ ನೀಡಲಾಗುತ್ತದೆ. ಹೊರಗಿನ ವ್ಯಕ್ತಿಗಳು ಆರೋಪಿಗಳಿಗೆ ಇಂತಹ ಶಿಕ್ಷೆ ನೀಡಬೇಕೆಂದು ಒತ್ತಾಯಿಸುವುದು ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಪಡಿಸುವುದು ಮತ್ತು ನ್ಯಾಯಾಂಗ ನಿಂದನೆಯಾಗುತ್ತದೆ.. ಆರೋಪಿಗಳಿಗೆ ಮರಣದಂಢನೆ ನೀಡಬೇಕೆಂದು ಒತ್ತಾಯಿಸುವುದು ಕಾನೂನು ಬಾಹಿರ ಮತ್ತು ಸಂವಿಧಾನ ವಿರೋಧಿ ಕೃತ್ಯ ಆಗಿದೆ..
ಆದರೆ ಸಂಘಟನೆಗಳು ಕಾನೂನನ್ನು ಕೈಗೆ ತೆಗೆದುಕೊಂಡು ಮರಣದಂಢನೆ ವಿಧಿಸಬೇಕೆಂದು ಪ್ರತಿಭಟನೆ ನಡೆಸಿದರೆ ಪೊಲೀಸರು ಮೌನವಾಗಿ ಪ್ರತ್ಯಕ್ಷಮತ್ತು ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ.. ಇಂತಹ ಘಟನೆಗಳು ಕಾನೂನು ಸುವ್ಯವಸ್ಥೆ ಮತ್ತು ಪೊಲೀಸರನ್ನು ದುರ್ಬಲಗೊಳಿಸುತ್ತದೆ. ಬಂದ್ ಕಾನೂನು ಬಾಹಿರವಾಗಿದ್ದರೂ ಸಹ ಪೊಲೀಸರು ಒತ್ತಡಕ್ಕೆ ಮಣಿದು ಮೌನ ವಹಿಸಿದ್ದರು.
ಚಿತ್ರ: ಕಾಂಗ್ರೆಸ್ ಮುಖಂಡ ಶ್ರೀನಿವಾಸನ್ ಕೊಲೆ ವಿರೋಧಿಸಿ ಆರೋಪಿಗಳಿಗೆ ಮರಣದಂಢನೆ ವಿಧಿಸಬೇಕೆಂದು ಒತ್ತಾಯಿಸಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ವಿವಿಧ ಸಂಘಟನೆಗಳಿ0ದ ಬಂದ್ ಆಚರಿಸಲಾಯಿತು.
