
ಬೆಂಗಳೂರು, 21 ಡಿಸೆಂಬರ್(ಹಿ.ಸ):
ಆ್ಯಂಕರ್ :
ಬೆಂಗಳೂರಿನಿಂದ ಕೊಯಮತ್ತೂರಿಗೆ ಹೋಗಿ ಬರುವ ಪ್ರಯಾಣಿಕರಿಗೆ ಈಗ ಎರಡನೇ ರೈಲು ಸಿಗುತ್ತಿದೆ. ಉದಯ್ ಎಕ್ಸ್ಪ್ರೆಸ್ ರೈಲಿನ ಜೊತೆಗೆ ಈಗ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಈ ಮಾರ್ಗದಲ್ಲಿ ಸಂಚರಿಸಲಿದೆ. ಈ ತಿಂಗಳ ಅಂತ್ಯದ ಒಳಗೆ (ಡಿಸೆಂಬರ್ನೊಳಗೆ) ವಂದೇ ಭಾರತ್ ಎಕ್ಸ್ಪ್ರೆಸ್ ರೈಲೊಂದು ಇಲ್ಲಿ ಸೇವೆ ಆರಂಭಿಸಲಿದೆ. ಬೆಂಗಳೂರು ಕೇಂದ್ರ ಕ್ಷೇತ್ರದ ಸಂಸದ ಪಿ.ಸಿ. ಮೋಹನ್ ಈ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಕರ್ನಾಟಕಕ್ಕೆ ನಾಲ್ಕನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಿಕ್ಕಂತಾಗುತ್ತದೆ.
ಕೊಯಮತ್ತೂರಿನಿಂದ ಬಹಳಷ್ಟು ಜನರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಬಹಳ ಅನುಕೂಲವಾಗಲಿದೆ. ಸದ್ಯ ಬೆಂಗಳೂರು ಮತ್ತು ಕೊಯಮತ್ತೂರು ನಡುವೆ ಸಂಚರಿಸುತ್ತಿರುವ ಉದಯ್ ಎಕ್ಸ್ಪ್ರೆಸ್ ರೈಲು 7 ಗಂಟೆ ತೆಗೆದುಕೊಳ್ಳುತ್ತದೆ. ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಒಂದೆರಡು ಗಂಟೆ ಬೇಗ ತಲುಪಲಿದೆ.
ಹಿಂದೂಸ್ತಾನ್ ಸಮಾಚಾರ್
