ಬಳ್ಳಾರಿ, 25ಅಕ್ಟೋಬರ್ (ಹಿ.ಸ):
ಆ್ಯಂಕರ್ :
.ರೈತರ ಬೆಳೆಗೆ ಅನುಕೂಲವಾಗುವಂತೆ ಏಳು ಗಂಟೆಗಳ ಕಾಲ ವಿದ್ಯುತ್ ಸರಭರಾಜು ಮಾಡುವ ಕುರಿತು
ಯುವ ಸಬಲೀಕರಣ ಕ್ರೀಡೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಜೆಸ್ಕಾಂ .ಕೆಪಿಟಿಸಿಎಲ್ ಅಧಿಕಾರಿಗಳ ಜೊತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದರು.
ಸಭೆಯಲ್ಲಿ ಅಧಿಕಾರಿಗಳ ಕುರಿತು ಮಾತನಾಡಿದ ಸಚಿವರು ಸರ್ಕಾರದ ಅದೇಶದಂತೆ ಭತ್ತದ ಬೆಳೆ ಸಂಪೂರ್ಣ ಕಟಾವಿಗೆ ಬರುವವರೆಗೂ ಏಳು ಗಂಟೆಗಳ ವಿದ್ಯುತ್ ಪೂರೈಕೆ ಮಾಡಬೆಕು.ಭತ್ತದ ಬೆಳೆ ನಂತರ ಮೆಣಸಿನಕಾಯಿ ಬೆಳೆಗೆ ಅನಾನುಕೂಲವಾಗದಂತೆ ವಿದ್ಯುತ್ ರೈತರಿಗೆ ವಿದ್ಯುತ್ ಸರಭರಾಜು ಮಾಡಲು ಸೂಚಿಸಿದರಲ್ಲದೆ,ಗ್ರಾಮಾಂತರ ಭಾಗಗಳಲ್ಲಿ ಪದೆ ಪದೆ ವಿದ್ಯುತ್ ನಿಲುಗಡೆ ಮಾಡದಂತೆ ಜೆಸ್ಕಾಂ ಅಧಿಕಾರಿಗಳಿಗೆ ತಾಖೀತು ಮಾಡಿದರು.
ನಮ್ಮಲ್ಲಿ ಅಗತ್ಯವಾದ ವಿದ್ಯುತ್ ಇದ್ದರೂ ಕೂಡ ಅಸಮರ್ಪಕ ಪೂರೈಕೆಯಿಂದ ರೈತರಿಗೆ ತೊಂದರೆಯಾಗುತ್ತಿದೆ ಅಲ್ಲದೆ ಸಣ್ಣ ರೈತರಿಗೆ ಅನುಕೂಲವಾಗುವ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಗಂಗಾಕಲ್ಯಾಣ ಯೋಜನೆಗೆ ವಿದ್ಯುತ್ ಸಂಪರ್ಕ ವಿಳಂಬ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು ಕಾಲಮಿತಿಯಲ್ಲಿ ಸಂಪರ್ಕ ನೀಡುವಂತೆ ಸೂಚಿಸಿದರು.
ಈಗಾಗಲೇ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ
ಏಳು ತಾಸು ವಿದ್ಯುತ್ ಸರಭರಾಜು ಮಾಡಲಾಗುತ್ತಿದೆ
ಜಿಂದಾಲ್ ಕಂಪನಿಯಿಂದ ನೂರು ಮೆಗಾವ್ಯಾಟ್ ವಿದ್ಯುತ್ ನೀಡುತ್ತಿದ್ದಾರೆ.ಇನ್ನು ಇಪ್ಪತ್ತು ದಿನಗಳ ಹೊತ್ತಿಗೆ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸಲಾಗುತ್ತಿದ್ದು ಸಮಸ್ಯೆ ಸುದಾರಿಸುವ ನಿರೀಕ್ಷೆ ಇದೆ ಎಂದು ಜೆಸ್ಕಾಂ ಅಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್ ಮಿಶ್ರ. ಸಿಇಒ ರಾಹುಲ್ ಶರಣಪ್ಪ ಸಂಕನೂರ.ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ರಂಜಿತ್ ಕುಮಾರ್ ಬಂಡಾರು.ಜೆಸ್ಕಾಂ ಮುಖ್ಯ ಇಂಜಿನಿಯರ್ ಲಕ್ಷ್ಮಣ್ ಚೌಹಾಣ್.ಅದೀಕ್ಷಕ ಅಭಿಯಂತರ ವೆಂಕಟೇಶ್.ಸೇರಿದಂತೆ ನಗರ ಮತ್ತು ಗ್ರಾಮೀಣ ಭಾಗದ ಕಾರ್ಯನಿರ್ವಾಹಕ ಅಭಿಯಂತರರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್
