ಬೆಂಗಳೂರು,24ನವೆಂಬರ್ (ಹಿ.ಸ):
ಆ್ಯಂಕರ್ :
ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ನಡೆಯಲು ಸಿದ್ಧತೆ ನಡೆಸಲಾಗಿದೆ. ನವೆಂಬರ್ 24 ರಿಂದ 26ರವರೆಗೆ ನಗರದ ಅರಮನೆ ಮೈದಾನದಲ್ಲಿ’ಬೆಂಗಳೂರು ಕಂಬಳ-ನಮ್ಮ ಕಂಬಳ’ ಕಾರ್ಯಕ್ರಮ ನಡೆಯಲಿದೆ. ನವೆಂಬರ್ 25 ಮತ್ತು 26ರಂದು ಕಂಬಳ ವೀಕ್ಷಿಸಲು ಲಕ್ಷಾಂತರ ಜನ ಅರಮನೆ ಮೈದಾನದಲ್ಲಿ ಸೇರುವ ನಿರೀಕ್ಷೆ ಇದ್ದು ಬೆಂಗಳೂರು ಸಂಚಾರ ಪೊಲೀಸರು, ಸುಗಮ ಸಂಚಾರ ಏರ್ಪಡಿಸಲು ಸೂಕ್ತ ಸಂಚಾರ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಪ್ರವೇಶ, ವಾಹನ ನಿಲುಗಡೆ ಸ್ಥಳ ಮತ್ತು ಬದಲೀ ಮಾರ್ಗಗಳ ಬಗ್ಗೆ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.
ಪ್ರವೇಶ ಮತ್ತು ವಾಹನ ನಿಲುಗಡೆ: ಸಿಬಿಡಿ ಏರಿಯಾ ದಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು ಮೇಕ್ರಿ ಸರ್ಕಲ್ ಬಳಿ ಯು ತಿರುವು ಪಡೆದು ಮೇಕ್ರಿ ಸರ್ಕಲ್ ಗೇಟ್ ನಂ-01 (ಕೃಷ್ಣವಿಹಾರ್) ರಲ್ಲಿ ಪ್ರವೇಶಿಸಿ, ವಾಹನಗಳನ್ನು ಪಾರ್ಕ್ ಮಾಡಿ ನಂತರ ಕಾರ್ಯಕ್ರಮದ ಸ್ಥಳಕ್ಕೆ ನಡೆದುಕೊಂಡು ಹೋಗಲು ಸೂಚಿಸಲಾಗಿದೆ. ಬಳ್ಳಾರಿ ರಸ್ತೆ ಹೆಬ್ಬಾಳ ಕಡೆಯಿಂದ ಬರುವ ವಾಹನಗಳು ಮೇಕ್ರಿ ಸರ್ಕಲ್ ಅಂಡರ್ ಪಾಸ್ ನಲ್ಲಿ ಬಂದು ಗೇಟ್ ನಂ-01 ಕೃಷ್ಣವಿಹಾರ್ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾರ್ಯಕ್ರಮದ ಸ್ಥಳವನ್ನು ನಡೆದು ತಲುಪುವುದು.
ಹಿಂದೂಸ್ತಾನ್ ಸಮಾಚಾರ್
