ಬೆಂಗಳೂರು, 31 ಜನವರಿ:
ಆ್ಯಂಕರ್ :ಬೆಂಗಳೂರು ನಗರದ ಹಲವೆಡೆ ಬುಧವಾರ (ಜನವರಿ 31) ಪವರ್ ಕಟ್ ಇರಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಲವಾರು ಯೋಜನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸುವ ಹಂತದಲ್ಲಿದ್ದು, ಇದಕ್ಕಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ನಗರದ ಹಲವು ಪ್ರದೇಶಗಳಲ್ಲಿ ಸೋಮವಾರ ಹಾಗೂ ಮಂಗಳವಾರ ವಿದ್ಯುತ್ ಕಡಿತ ಮಾಡಲಾಗಿತ್ತು.
ಕಾಮಗಾರಿಗಳಲ್ಲಿ ನಿಯಮಿತ ನಿರ್ವಹಣೆ, ದುರಸ್ತಿ ಕಾರ್ಯಗಳಾದ ನವೀಕರಣ, ಆಧುನೀಕರಣ, ಲೈನ್ ನಿರ್ವಹಣೆ, ಓವರ್ಹೆಡ್ನಿಂದ ಅಂಡರ್ಗ್ರೌಂಡ್ ಕೇಬಲ್ಗಳನ್ನು ಬದಲಾಯಿಸುವುದು, ಕಂಬಗಳ ಸ್ಥಳಾಂತರ, ರಿಂಗ್ ಮುಖ್ಯ ಘಟಕ ನಿರ್ವಹಣೆ, ಮರದ ಟ್ರಿಮ್ಮಿಂಗ್, ಜಲಸಿರಿ 24 x 7 ನೀರು ಸರಬರಾಜು ಕೆಲಸ ಮತ್ತು ಭೂಗತ ಕೇಬಲ್ ಹಾನಿ ಸರಿಪಡಿಸುವಿಕೆ ಸೇರಿವೆ.
ಪವರ್ ಕಟ್ ಸಮಯ ಹೆಚ್ಚಿನ ಕಡೆಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರ ನಡುವೆ ಇರಲಿದೆ. ಆದಾಗ್ಯೂ, ಕೆಲವು ಕೆಲಸಗಳನ್ನು ಮೊದಲೇ ಪೂರ್ಣಗೊಳಿಸುವ ನಿರೀಕ್ಷೆ ಇದೆ. ವಿದ್ಯುತ್ ಕಡಿತದ ಸಂಭಾವ್ಯ ಪ್ರದೇಶಗಳ ಪಟ್ಟಿ ಹೀಗಿದೆ;
