ಹುಬ್ಬಳ್ಳಿ,
ಆ್ಯಂಕರ್: ಎಲ್ಲೆಡೆಯೂ ಬಣ್ಣ ಬಣ್ಣದ ಚಿತ್ತಾರ. ಮುಗಿಲು ಮುಟ್ಟಿದ ಹರ್ಷೋದ್ಗಾರ, ಬಣ್ಣ ಎರಚುತ್ತಿರುವ ಪುಟ್ಟ ಪುಟ್ಟ ಕೈಗಳು. ಹುಚ್ಚೆದ್ದು ಕುಣಿಯುತ್ತಿರುವ ಪಡ್ಡೆಗಳು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಂದು ಹೋಳಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಹಿರಿಯರು ಕಿರಿಯರು ಎಂಬ ವಯಸ್ಸಿನ ಭೇದ ಭಾವವಿಲ್ಲದೆ ಎಲ್ಲರೂ ರಂಗು ರಂಗಿನ ಬಣ್ಣದಲ್ಲಿ ಮಿಂದೆದ್ದರು. ಸುಮಾರು ಸಾವಿರಕ್ಕೂ ಆಧಿಕ ಪೋಲಿಸರು ನಗರದ ವಿವಿಧೆಡೆ ಬಿಡು ಬಿಟ್ಟು ಶಾಂತಿಯುತವಾಗಿ ಬಣ್ಣದಾಟ ಆಡುವಂತೆ ನೋಡಿಕೊಂಡರು.
ಹೋಳಿ ಹುಣ್ಣಿಮೆ ಹಿನ್ನಲೆ ಹುಬ್ಬಳ್ಳಿ ನಗರಯಲ್ಲಿಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಹೋಳಿ ಹುಣ್ಣಿಮೆ ಮುಂಜಾಗ್ರತೆ ಕುರಿತು ಮಾತನಾಡಿದ ಅವರು, ‘ಕಾಮಣ್ಣನ ಪ್ರತಿಷ್ಠಾಪನೆ ಮಾಡಿದ ಸುತ್ತಮುತ್ತಲ ವಿವಿಧ ಪ್ರದೇಶದಲ್ಲಿ 250 ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಈ ಕುರಿತು ಕಳೆದ ಒಂದು ತಿಂಗಳಿಂದ ನಾವು ಮುಂಜಾಗ್ರತೆ ವಹಿಸಿದ್ದೇವೆ ಎಂದರು.
ಯಾವುದೇ ಜಾತಿ-ಮತ ಭೇದವಿಲ್ಲದೆ ಎಲ್ಲರೂ ಪರಸ್ಪರ ಬಣ್ಣ ಹಚ್ಚಿ ಹೋಳಿ ಆಚರಿಸಿದರು. ಹುಣ್ಣಿಮೆಯ ದಿನದಂದೆ ಇಲ್ಲಿ ಕಾಮಣ್ಣ ಮತ್ತು ರತಿಯನ್ನು ಪೂಜೆಗೆ ಪ್ರತಿಷ್ಟಾಪಿಸಿ ಐದು ದಿನಗಳ ಕಾಲ ವಿಶಿಷ್ಟವಾಗಿ ಪೂಜೆ ಸಲ್ಲಿಸಲಾಗುತ್ತದೆ. ಐದನೇ ದಿನದಂದು ರಂಗಪಂಚಮಿ ಆಚರಿಸಲಾಗುತ್ತದೆ.
ಹಾಗಾಗಿ ಹುಬ್ಬಳ್ಳಿ ಜನತೆಗೆ ಹೋಳಿ ಹಬ್ಬ ಬಂತೆಂದರೆ ಇನ್ನಿಲ್ಲದ ಸಂತೋಷ. ನಗರದಲ್ಲಿ ಡ್ಯಾನ್ಸ್ ಮಾಡುವ ಮೂಲಕ ರಂಗಿನಾಟವನ್ನು ಆಡುತ್ತಾರೆ. ಆದರೆ ಈ ಬಾರಿ ಕೊರೊನಾ ಕರಿನೆರಳಿನಿಂದ ಕೊಂಚ ಮಟ್ಟಿಗೆ ಸಂಭ್ರಮ ಕಡಿಮೆಯಾಗಿದ್ದಂತೂ ಸತ್ಯ.
