ಚಾಮರಾಜನಗರ, 3 ಫೆಬ್ರವರಿ :
ಆ್ಯಂಕರ್ :
ಫೆಬ್ರವರಿ 03: ಬಂಡೀಪುರದ ರಾಮಾಪುರ ಆನೆ ಬಿಡಾರದಲ್ಲಿ ಆನೆ ಮೃತಪಟ್ಟಿದೆ. ಹಾಸನದ ಬೇಲೂರಿನಲ್ಲಿ ಸೆರೆ ಹಿಡಿಯಲಾಗಿದ್ದ ತಣ್ಣೀರ್ ಕೊಂಬನ್ ಎಂಬ ಆನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ರೇಡಿಯೋ ಕಾಲರ್ ಅಳವಡಿಸಿ ಬಂಡೀಪುರದ ಅರಣ್ಯಕ್ಕೆ ಬಿಟ್ಟಿದ್ದರು. ಈ ತಣ್ಣೀರ್ ಕೊಂಬನ್ ಆನೆ ಕೇರಳದ ವಯನಾಡು ವ್ಯಾಪ್ತಿಯ ಮಾನಂದವಾಡಿ ಪಟ್ಟಣದ ಜನನಿಬೀಡ ಪ್ರದೇಶಕ್ಕೆ ನುಗ್ಗಿತ್ತು. ಈ ವಿಚಾರ ತಿಳಿದು ಕೇರಳದ ಅರಣ್ಯ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆನೆಗೆ ಡಾಟಿಂಗ್ ಮಾಡಿ ಸೆರೆ ಹಿಡಿದು, ಲಾರಿಯಲ್ಲಿ ಬಂಡೀಪುರದ ರಾಮಾಪುರ ಆನೆ ಶಿಬಿರಕ್ಕೆ ನಿನ್ನೆ ರಾತ್ರಿ ಕರೆತಂದಿದ್ದರು.
