ಚಿಕ್ಕಮಗಳೂರು, 26 ಏಪ್ರಿಲ್ಆ್ಯ ಕರ್:ಮತದಾನ ಪ್ರತಿಯೊಬ್ಬರ ಹಕ್ಕು. ಎಲ್ಲರೂ ಮತದಾನ ಮಾಡುವುದು ಅಗತ್ಯ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ವಧುವೊಬ್ಬಳು ಮದುವೆ ಮಂಟಪಕ್ಕೆ ಹೋಗೋಕು ಮುನ್ನ ಮತ ಚಲಾಯಿಸಿದ ಘಟನೆ ದೃಶ್ಯ ಸಮೇತ ಬೆಳಕಿಗೆ ಬಂದಿದೆ. ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸಿಂಗಾರಗೊಂಡು ಮದುವೆ ಮಂಟಪಕ್ಕೆ ತೆರಳಬೇಕಾಗಿದ್ದ ವಧು ಕುಂದೂರು ಮತಕೇಂದ್ರದಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. ಆ ಮೂಲಕ ತಾನೂ ಮತದಾನ ಮಾಡಲು ಅರ್ಹ ಎಂಬುದನ್ನು ತಿಳಿಸಿದ್ದಾರೆ. ಇವರನ್ನು ಕಂಡು ಮತದಾನ ಮಾಡಲು ಬಂದವರು ಅಚ್ಚರಿಯಿಂದ ಕಂಡಿದ್ದಾರೆ.
