ಮಂಗಳೂರು, 30 ಡಿಸೆಂಬರ್(ಹಿ.ಸ):
ಆ್ಯಂಕರ್ :
ಮೊದಲ ಬಾರಿಗೆ ಬೆಂಗಳೂರಿನ ನಡೆದ ಕಂಬಳ ಇನ್ನೂ ಜನರ ಮನಸ್ಸಿನಿಂದ ಹೋಗಿಲ್ಲ. ಕೋಣಗಳ ಓಟ ಕಂಬಳ ಇಡೀ ಬೆಂಗಳೂರು ಮಂದಿಯ ಗಮನಸೆಳೆದಿದ್ದವು. ಇದೀಗ ಮಂಗಳೂರು ಕಂಬಳ ಸರದಿ ಬಂದಿದೆ. ಇಂದು ಅಂದರೆ ಡಿಸೆಂಬರ್ 30ರಂದು ಮಂಗಳೂರು ನಗರದ ಬಂಗ್ರಕೂಳೂರಿನಲ್ಲಿರುವ ಗೋಲ್ಡ್ ಫಿಂಚ್ ಸಿಟಿಯಲ್ಲಿ ಕಂಬಳ ಅದ್ಧೂರಿಯಾಗಿ ನಡೆಯಲಿದೆ. ಇದರ ಅಂಗವಾಗಿ ಛಾಯಾಚಿತ್ರ ಸ್ಪರ್ಧೆ, ಕಲರ್ ಕೂಟ ಮತ್ತು ರೀಲ್ ಕಂಟೆಸ್ಟ್ ಆಯೋಜಿಸಲಾಗಿದೆ. ಈ ಬಗ್ಗೆ ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಬೃಜೇಶ್ ಚೌಟ ಮಾಹಿತಿ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
