
ಚಿಕ್ಕಮಗಳೂರು, 23 ಜನವರಿ(ಹಿ.ಸ):
ಆ್ಯಂಕರ್ : ಮುಜರಾಯಿ ಇಲಾಖೆ ಮೂಲಕ ದೇವಾಲಯಗಳನ್ನು ಸಂರಕ್ಷಿಸಬೇಕು. 44 ವರ್ಷದಿಂದ ದೇವಾಲಯದಲ್ಲಿ ಅರ್ಚಕನಾಗಿ ಕೆಲಸ ಮಾಡಿದ್ದೇನೆ. ದೇವಾಲಯಕ್ಕೆ ಆದಾಯ ಇಲ್ಲ ಎಂದು ಸಂಬಳ ತಡೆಹಿಡಿದು, ನೀಡಿದ್ದ ವೇತನ ವಾಪಸ್ ಕೇಳುವುದು ಸರಿಯಲ್ಲ. ದೇವಾಲಯಗಳಲ್ಲಿ ಅರ್ಚಕರ ಕೊರತೆ ಇದೆ. ಬಡ ಅರ್ಚಕರ ವೇತನವನ್ನು ವಾಪಸ್ ಕೇಳುವುದು ಎಷ್ಟು ಸರಿ. ಜಿಲ್ಲಾಡಳಿತದ ಈ ನಡೆ ಅಚ್ಚರಿತರಿಸಿದೆ ಎಂದು ಕನ್ನಡದ ಪೂಜಾರಿ, ಅರ್ಚಕ ಹಿರೇಮಗಳೂರು ಕಣ್ಣನ್ ಅಸಮಾಧನ ವ್ಯಕ್ತಪಡಿಸಿದರು.
ಚಿಕ್ಕಮಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಸಾಹಿತಿಗಳಿಗೆ ಪ್ರೋತ್ಸಾಹ ನೀಡಬೇಕು. ಬಡ ಅರ್ಚಕರ ಸಂಬಳವನ್ನು ವಾಪಸ್ ಕೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಸರ್ಕಾರ ನೀಡಿರುವ ನೋಟಿಸ್ ಬಗ್ಗೆ ಹಿರೇಮಗಳೂರು ಕಣ್ಣನ್ ಅವರು ಮಾಜಿ ಸಚಿವ ಸಿಟಿ ಅವರಿಗೆ ತಿಳಿಸಿದ್ದು “ಯಾರು ಕೂಡ ಹಣ ವಾಪಸ್ ನೀಡುವುದು ಅವಶ್ಯಕತೆ ಇಲ್ಲ” ಎಂದು ಸಿಟಿ ರವಿ ಹೇಳಿದ್ದಾರೆ.
ಸರ್ಕಾರ ಹುಚ್ಚು ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಇದು. ನೀಡಿದ್ದ ವೇತನವನ್ನು ವಾಪಸ್ ನೀಡುವಂತೆ ಹಿರೇಮಗಳೂರು ಕಣ್ಣನ್ ಅವರಿಗೆ ನೋಟಿಸ್ ನೀಡಲಾಗಿದೆ. ಇದು ಕನ್ನಡದ ಪೂಜಾರಿಗೆ ಮಾಡುವ ದೊಡ್ಡ ಅಪಚಾರವಾಗಿದೆ. ಅರ್ಚಕರಿಗೆ ಮಾಡುತ್ತಿರುವ ದೊಡ್ಡ ಅವಮಾನವಿದು. ಹಿಂದೂ ಸಮಾಜ ಇದನ್ನೂ ಒಪ್ಪುವುದಿಲ್ಲ. ನಿಮಗೂ ಹೀಗೆ ಸಂಬಳ ವಾಪಸ್ ನೀಡಿ ಅಂದರೇ ಹೇಗೆ ಆಗುತ್ತದೆ? ಕಳೆದ 44 ವರ್ಷದಿಂದ ಅವರು ಕೋದಂಡರಾಮನ ಪೂಜೆ ಮಾಡಿದ್ದಾರೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದರು.
ಹಿಂದೂಸ್ತಾನ್ ಸಮಾಚಾರ್
