ಬೆಂಗಳೂರು, 15 ಡಿಸೆಂಬರ್(ಹಿ.ಸ):
ಆ್ಯಂಕರ್ :
: ವಾಹನ ಚಾಲನಾ ತರಬೇತಿ ಶುಲ್ಕವನ್ನು ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಿದ್ದು, ಡ್ರೈವಿಂಗ್ ಸ್ಕೂಲ್ ಮಾಲೀಕರ ಒಂದು ದಶಕದ ಬೇಡಿಕೆಯನ್ನು ಈಡೇರಿಸಿದೆ. ಇದರೊಂದಿಗೆ 10 ವರ್ಷಗಳ ನಂತರ ಇದೇ ಮೊದಲ ಬಾರಿಗೆ ವಾಹನ ಚಾಲನಾ ತರಬೇತಿ ಶುಲ್ಕ ಏರಿಕೆ ಮಾಡಿದಂತಾಗಿದ್ದು, ಲೈಸೆನ್ಸ್ ಪಡೆಯುವುದೂ ದುಬಾರಿಯಾಗಲಿದೆ.
ಕಾರುಗಳ ಬೆಲೆ ಗಗನಕ್ಕೆ ಏರಿದೆ, ಸಾರಿಗೆ ಇಲಾಖೆ ಕೂಡ ದರ ಹೆಚ್ಚಳ ಮಾಡಿದೆ, ಮಕ್ಕಳ ಸ್ಕೂಲ್ ಬಾಡಿಗೆ ಕಟ್ಟಲು ಆಗ್ತಿಲ್ಲ, ಕೆಲಸಗಾರರಿಗೆ ಸಂಬಳ ಕೊಡಲು ಆಗ್ತಿಲ್ಲ, ಎಂದು ರಾಜ್ಯ ಸಾರಿಗೆ ಇಲಾಖೆಯ ಮುಂದೆ ಡ್ರೈವಿಂಗ್ ಸ್ಕೂಲ್ ಮಾಲೀಕರು ನೋವು ತೊಡಿಕೊಂಡಿದ್ದರು. ಇದೀಗ ಸಾರಿಗೆ ಇಲಾಖೆ ಅವರಿಗೆ ಶುಭ ಸುದ್ದಿ ನೀಡಿದೆ.
ರಾಜ್ಯದಲ್ಲಿ ಬೆಲೆ ಏರಿಕೆ ತಾಂಡವವಾಡ್ತಿದೆ. ದಿನವೂ ಒಂದಿಲ್ಲೊಂದರ ಬೆಲೆ ಹೆಚ್ಚಾಗ್ತಿದ್ದು ಜನ ಬೇಸತ್ತು ಹೋಗಿದ್ದಾರೆ. ಇದೀಗ ವಾಹನ ಚಾಲನಾ ತರಬೇತಿ ಶುಲ್ಕವೂ ಹೆಚ್ಚಳವಾಗಿದ್ದು ಸಾರಿಗೆ ಇಲಾಖೆ ಪರಿಷ್ಕೃತ ದರ ಪಟ್ಟಿ ಬಿಡುಗಡೆ ಮಾಡಿದೆ.
ಹಿಂದೂಸ್ತಾನ್ ಸಮಾಚಾರ್
