ಬೆಂಗಳೂರು, 23 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ದಸರಾ ರಜೆ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ರಜೆ ಬಳಿಕ ಇಂದಿನಿಂದ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಪುನಾರಂಭಗೊಂಡಿವೆ.
ಸಮೀಕ್ಷೆಗಾಗಿ ಸರ್ಕಾರ ವಿದ್ಯಾರ್ಥಿಗಳಿಗೆ ರಜೆ ವಿಸ್ತರಣೆ ಮಾಡಿ ಶಿಕ್ಷಕರನ್ನು ಸಮೀಕ್ಷಾ ಕಾರ್ಯಕ್ಕೆ ಬಳಸಿಕೊಂಡಿತ್ತು. ಸದ್ಯ ಸಮೀಕ್ಷೆ ಕಾರ್ಯ ಮುಂದುವರಿಯುತ್ತಿದ್ದರೂ ಶಿಕ್ಷಕರನ್ನು ಈ ಕಾರ್ಯದಿಂದ ಬಿಡುಗಡೆ ಮಾಡಲಾಗಿದೆ.
ಈ ಹಿನ್ನೆಲೆ ಇಂದಿನಿಂದ ತರಗತಿಗಳು ಮರು ಪ್ರಾರಂಭವಾಗಿದೆ. ರಜೆಯಲ್ಲಿ ಬಾಕಿ ಉಳಿದಿರುವ ಪಾಠವನ್ನು ಹೆಚ್ವುವರಿ ತರಗತಿ ನಡೆಸಿ ಮುಕ್ತಾಯಗೊಳಿಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
