ಬೆಂಗಳೂರು, 1 ಡಿಸೆಂಬರ್(ಹಿ.ಸ):
ಆ್ಯಂಕರ್ :
ವಿಕೃತ ಮನಸ್ಸಿನ ದುಷ್ಟರು ಮತ್ತೊಮ್ಮೆ ನಗರದ ಹಲವು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆಯ ಈಮೇಲ್ ಗಳನ್ನು ಕಳಿಸಿ ದಾರ್ಷ್ಟ್ಯತೆ ಮೆರೆದಿದ್ದಾರೆ. ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಬೆಂಗಳೂರು ಪೊಲೀಸ್ ಕಮೀಶನರ್ ಬಿ ದಯಾನಂದ , ಪೋಷಕರು ಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲ, ಬಾಂಬ್ ಪತ್ತೆ ದಳ ಮತ್ತು ನಿಷ್ಕ್ರಿಯ ದಳಗಳನ್ನು ಬೆದರಿಕೆಗೊಳಗಾಗಿರುವ ಎಲ್ಲ ಶಾಲೆಗಳಿಗೆ ಕಳಿಸಲಾಗಿದ್ದು ಅವರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದರು. ಕಳೆದ ಸಲದ ಹಾಗೆ ಈ ಬಾರಿಯೂ ಕಿಡಿಗೇಡಿಗಳ ಹುಸಿ ಬೆದರಿಕೆ ಕರೆಗಳಾಗಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಆಯುಕ್ತ ಹೇಳಿದರು. ಹಿಂದೆ ಹೀಗೆಯೇ ಶಾಲೆಗಳಿಗೆ ಹುಸಿ ಬೆದರಿಕೆಯ ಕರೆ ಮತ್ತು ಈಮೇಲ್ ಗಳು ಬಂದಾಗ ಪರಿಶೀಲನೆ ನಡೆಸಿ ಪತ್ತೆ ಮಾಡಲಾಗಿತ್ತು ಎಂದು ಆಯುಕ್ತರು ಹೇಳಿದರಾದರೂ ಆ ಕಿಡಿಗೇಡಿಗಳು ಯಾರು ಅವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಾಗಿತ್ತು ಅನ್ನೋದನ್ನು ಹೇಳಲಿಲ್ಲ.
ಹಿಂದೂಸ್ತಾನ್ ಸಮಾಚಾರ್
