ಗದಗ,, 17 ಡಿಸೆಂಬರ್(ಹಿ.ಸ):
ಆ್ಯಂಕರ್ :
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಿಲ್ಲಾ ಪ್ರವಾಸದ ವೇಳೆ 2 ಹೆಲಿಪ್ಯಾಡ್ಗಳಿಂದಾಗಿ ಪೈಲಟ್ ಗೊಂದಲಕ್ಕೊಳಗಾದ ಪ್ರಸಂಗ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಬ್ಬಳ್ಳಿಯಲ್ಲಿರುವ ಗದಗಕ್ಕೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೆಲಿ ಕಾಫ್ಟರ್ನಲ್ಲಿ ಪ್ರಯಾಣಿಸಿದರು. ಗದಗ್ನಲ್ಲಿ ಹೆಲಿಕಾಫ್ಟರ್ ಲ್ಯಾಂಡಿಂಗ್ ಮಾಡುವಾಗ ಒಂದೇ ಸ್ಥಳದಲ್ಲಿ 2 ಹೆಲಿಪ್ಯಾಡ್ಗಳನ್ನು ನಿರ್ಮಿಸಲಾಗಿತ್ತು.
ಪೈಲಟ್ ಮೊದಲು ಸಿಗುವಂತಹ ಚಿಕ್ಕದಾದ ಹೆಲಿಪ್ಯಾಡ್ನಲ್ಲಿ ಹೆಲಿಕಾಫ್ಟರ್ ಅನ್ನು ಲ್ಯಾಂಡ್ ಮಾಡಲು ಮುಂದಾದರು. ಭೂಮಿಗೆ ಕೇವಲ ನಾಲ್ಕೈದು ಅಡಿಗಳ ಅಂತರದಲ್ಲಿದ್ದಾಗ ಇದು ನಿಗದಿತ ಹೆಲಿಪ್ಯಾಡ್ ಅಲ್ಲ ಎಂದು ಮನವರಿಕೆಯಾಗಿ ಮತ್ತೆ ಟೇಕ್ ಆಫ್ ಆಗಿದ್ದು ಕೆಲವೇ ಮೀಟರ್ಗಳ ಅಂತರದಲ್ಲಿ ಮತ್ತೊಂದು ಹೆಲಿಪ್ಯಾಡ್ನಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
