ಬಳ್ಳಾರಿ, 14 ಡಿಸೆಂಬರ್(ಹಿ.ಸ):
ಆ್ಯಂಕರ್ : ಅಂಚೆ ಇಲಾಖೆಯಿಂದ ನಿವೃತ್ತರಾದ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ಇಲಾಖಾ ನೌಕರರಿಗಾಗಿ ಮತ್ತು ಕುಟುಂಬ ಪಿಂಚಣಿ ಪಡೆಯುತ್ತಿರುವ ನಿವೃತ್ತ ಅಂಚೆ ನೌಕರರ ಕುಟುಂಬದವರಿಗಾಗಿ ಡಿ.18ರಂದು ಸಂಜೆ 4ಕ್ಕೆ ಬಳ್ಳಾರಿ ವಿಭಾಗ ಅಂಚೆ ಕಚೇರಿಯಲ್ಲಿ ಪಿಂಚಣಿ ಅದಾಲತ್ ಆಯೋಜಿಸಲಾಗಿದೆ.
ಪಿಂಚಣಿದಾರರು ತಮ್ಮ ಕುಂದು-ಕೊರತೆಗಳಿದ್ದರೆ ಅಂಚೆ ಅಧೀಕ್ಷಕರು, ಬಳ್ಳಾರಿ ವಿಭಾಗ, ವಿಭಾಗೀಯ ಕಾರ್ಯಾಲಯ ಕೋಟೆ, ಬಳ್ಳಾರಿ, ಅವರಿಗೆ ಡಿ.18 ಮುಂಚಿತವಾಗಿ ತಲಪುವಂತೆ ಪತ್ರ ಮುಖೇನ ಅಥವಾ ಜobಚಿಟಟಚಿಡಿi.ಞಚಿ@iಟಿಜiಚಿಠಿosಣ.gov.iಟಿ ಗೆ ಇ-ಮೇಲ್ ಮುಖಾಂತರ ಕಳುಹಿಸಿಕೊಡಬಹುದು ಎಂದು ಬಳ್ಳಾರಿ ವಿಭಾಗ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
