ಬಳ್ಳಾರಿ, 5 ಜನವರಿ(ಹಿ.ಸ):
ಆ್ಯಂಕರ್ : ತೋಟಗಾರಿಕೆಯು ಪರಿಸರವನ್ನು ಸ್ವಚ್ಛ ಸುಂದರಗೊಳಿಸುತ್ತದೆ ಮತ್ತು ಪರಿಸರದ ಅಂದವನದ್ನು ಹೆಚ್ಚಿಸುತ್ತದೆ ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಉಪಮೇಯರ್ ಬಿ.ಜಾನಕಿ ಅವರು ಹೇಳಿದ್ದಾರೆ.
ತೋಟಗಾರಿಕೆ ಇಲಾಖೆ ವತಿಯಿಂದ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ತೋಟಗಾರಿಕೆ ಕುರಿತಂತೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಾಲೆಯ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಿಂಗಳ ನಂತರ ಬೇಸಿಗೆಯು ಆರಂಭವಾಗಲಿದ್ದು ಬಳ್ಳಾರಿಯ ಬಿಸಿಲು ನಾಡಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ನೆಟ್ಟು ಅದರ ಕಾಳಜಿ ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಿಪಂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರತ್ನಪ್ರಿಯಾ ಯರಗಲ್ಲ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತೋಟಗಾರಿಕೆ ವಲಯದಲ್ಲಿ ಆಗಿರುವ ಆವಿಷ್ಕಾರಗಳ ಕುರಿತಂತೆ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸವಾಗಬೇಕು. , ಕೈತೋಟ ಮತ್ತು ತಾರಸಿತೋಟ, ಹೈಡ್ರೋಪೆÇೀನಿಕ್ಸ್, ಸಸ್ಯಾಭಿವೃದ್ಧಿ ಕುರಿತು ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ವೃತ್ತಿ ಆಧಾರಿತ ಬುನಾದಿ ವಿಷಯ ಸೇರಿದಂತೆ ತೋಟಗಾರಿಕೆ ಮಾಹಿತಿ ನೀಡಬೇಕು ಎಂದು ಅಭಿಪ್ರಾಯ ಪಟ್ಟರು.
ಕರ್ನಾಟಕ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶಮೀಮ್ ಜರಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಕೆ.ಈರಮ್ಮ, ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಚಾರ್ಯರಾದ ಸುಲೇಖಾ, ಉಪ ಪ್ರಾಚಾರ್ಯ ಜಾಯ್ ದೆಬೋರಾ, ಬಳ್ಳಾರಿ ತಾಲ್ಲೂಕಿನ ಪೂರ್ವವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಯ್ ಮುರ್ ರೆಹಮಾನ್ ಸೇರಿದಂತೆ ಶಾಲೆಯ ಎಸ್ಡಿಎಂಸಿ ಸದಸ್ಯರು ಹಾಗೂ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
