
ಚಿಕ್ಕಮಗಳೂರು, 30 ನವೆಂಬರ್ (ಹಿ.ಸ):
ಆ್ಯಂಕರ್ :
ಖ್ಯಾತ ಉದ್ಯಮಿ ದಿವಂಗತ ವಿ.ಜಿ. ಸಿದ್ಧಾರ್ಥ ಅವರ ಸ್ಮರಣಾರ್ಥ ಅಂಬರ್ ವ್ಯಾಲಿ ಶಾಲೆಯಿಂದ ಎರಡನೇ ಆವೃತ್ತಿಯ ಅಂತರ ಶಾಲಾ ರಸಪ್ರಶ್ನೆ ಸ್ಪರ್ಧೆ 2023ಯ ಅಂತಿಮ ಸುತ್ತನ್ನು ನ.30 ರಂದು ಹಮ್ಮಿಕೊಳ್ಳಲಾಗಿದೆ.
ಶ್ರೀಮತಿ ಐಶ್ವರ್ಯ ಡಿಕೆಎಸ್ ಹೆಗಡೆ ಅವರ ನೇತೃತ್ವದಲ್ಲಿ ಅಂಬರ್ ವ್ಯಾಲಿ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ವಿವಿಧ ವಿನೂತನ ಚಟುವಟಿಕೆಗಳ ಪೈಕಿ ಈ ರಸಪ್ರಶ್ನೆ ಸ್ಪರ್ಧೆ ಕೂಡ ಒಂದಾಗಿದೆ.
ದೇಶದ 72 ಪ್ರದೇಶಗಳಲ್ಲಿ ಈ ರಸಪ್ರಶ್ನೆ ಕಾರ್ಯಕ್ರಮವನ್ನು ಡಿಜಿಟಲ್ ವೇದಿಕೆ ಮೂಲಕ ಹಮ್ಮಿಕೊಳ್ಳಲಾಗಿತ್ತು. ಹತ್ತು ವಿದ್ಯಾರ್ಥಿಗಳು ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಾರಣಾಸಿ, ಸೋನೇಪಟ್, ಗ್ವಾಲಿಯರ್, ಮುಂಬೈ, ಕೊಚ್ಚಿ, ಚೆನ್ನೈ, ಮತ್ತು ಬೆಂಗಳೂರಿನ ಶಾಲಾ ಮಕ್ಕಳು ಈ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲಲು ಸ್ಪರ್ಧಿಸಲಿದ್ದಾರೆ.
ಈ ಹತ್ತೂ ವಿದ್ಯಾರ್ಥಿಗಳು ಚಿಕ್ಕಮಗಳೂರಿನ ಪ್ರವಾಸದ ಎಲ್ಲಾ ಖರ್ಚು ಗೆದ್ದಿದ್ದು, ಪ್ರತಿಷ್ಠಿತ ರೆಸಾರ್ಟ್ ನಲ್ಲಿ ಎರಡು ರಾತ್ರಿಗಳ ವಾಸ್ತವ್ಯ ಮಾಡಲಿದ್ದಾರೆ. ಅಲ್ಲದೆ ಗಣ್ಯ ಅತಿಥಿಗಳನ್ನು ಭೇಟಿ ಮಾಡಲಿದ್ದಾರೆ.
ಅಂತಿಮ ಸುತ್ತಿನಲ್ಲಿ ಗೆಲುವು ಸಾಧಿಸುವ ವಿದ್ಯಾರ್ಥಿ 1 ಲಕ್ಷದ ವರೆಗಿನ ವಿದ್ಯಾರ್ಥಿ ವೇತನ ಹಾಗೂ ಪ್ರತಿಷ್ಠಿತ ವಿ.ಜಿ ಸಿದ್ಧಾರ್ಥ ಅವರ ಸ್ಮರಣೀಯ ಕ್ವಿಜ್ ಟ್ರೋಫಿ ಪಡೆಯಲಿದ್ದಾರೆ.
ಮೂವರು ರನ್ನರ್ ಅಪ್ ವಿದ್ಯಾರ್ಥಿಗಳು ಐಪ್ಯಾಡ್ ಪಡೆಯಲಿದ್ದಾರೆ. ಎಲ್ಲಾ ಸ್ಪರ್ಧಿಗಳು ಪ್ರಮಾಣ ಪತ್ರ ಹಾಗೂ ಉಡುಗೊರೆ ಪಡೆಯಲಿದ್ದಾರೆ.
ಈ ಸ್ಪರ್ಧೆಯ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಐಶ್ವರ್ಯ ಡಿಕೆಎಸ್ ಹೆಗಡೆ ಅವರು, ಉತ್ತಮ ಭಾರತ್ಕಾಗಿ ಮಗು ನಾನು ಎಂಬ ಪರಿಕಲ್ಪನೆಯ ರಸಪ್ರಶ್ನೆ ಇದಾಗಿದ್ದು, ನಮ್ಮ ಮಕ್ಕಳು ಯಶಸ್ಸು ಸಾಧಿಸುವುದಷ್ಟೆ ಅಲ್ಲ, ಅವರು ಉತ್ತಮ ಭಾರತದ ನಿರ್ಮಾಣಕ್ಕೆ ಕೊಡುಗೆ ನೀಡುವಂತೆ ಉತ್ತೇಜನ ನೀಡಬೇಕು. ನಮ್ಮ ಎಲ್ಲಾ ವಿದ್ಯಾರ್ಥಿಗಳು ಯಶಸ್ವಿಯಾಗಬೇಕು ಎಂಬ ನಮ್ಮ ಶಾಲೆಯ ಧ್ಯೇಯ ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರತಿಫಲನವಾಗಬೇಕು. ಪ್ರತಿ ಯುವಕರ ಮೆದುಳು ಪ್ರತಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವ ಸಾಮರ್ಥ್ಯ ಹೊಂದಿರುತ್ತದೆ ಎಂದು ತಿಳಿಸಿದರು.
ಈ ಅಂತಿಮ ಸುತ್ತಿನ ಸ್ಪರ್ಧೆಯನ್ನು ಖ್ಯಾತ ಕ್ವಿಜ್ ಮಾಸ್ಟರ್ ಗಿರಿ ಪಿಕ್ ಬ್ರೈನ್ ಅವರು ನಡೆಸಿಕೊಡಲಿದ್ದಾರೆ. ತಿರುವನಂತಪುರದ ಸಂಸದರಾದ ಶಶಿ ತರೂರ್ ಅವರು ಈ ಸ್ಪರ್ಧೆಯ ಮುಖ್ಯ ಅತಿಥಿಯಾಗಿರುತ್ತಾರೆ.
ಹತ್ತೂ ಸ್ಪರ್ಧಿಗಳು ಡಾ. ಶಶಿತರೂರ್ ಅವರ ಜೊತೆ ಮಾತುಕತೆ ನಡೆಸುವ ಅವಕಾಶ ಪಡೆಯಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
