
ಬರಿಪಾದಾ,20ನವೆಂಬರ್ (ಹಿ.ಸ):
ಆ್ಯಂಕರ್ :ಒಡಿಶಾದ ಬರಿಪಾದಾದಲ್ಲಿ ಇಂದಿನಿಂದ ನಡೆಯಲಿರುವ ಅಖಿಲ ಭಾರತ ಸಂತಾಲಿ ಲೇಖಕರ ಸಂಘದ ೩೬ನೇ ವಾರ್ಷಿಕ ಸಮ್ಮೇಳನ ಮತ್ತು ಸಾಂಸ್ಕೃತಿಕ ಉತ್ಸವದ ಆರಂಭಿಕ ಆವೃತ್ತಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪಾಲ್ಗೊಳ್ಳಲಿದ್ದಾರೆ. ಭೇಟಿಯ ವೇಳೆ ಅವರು, ಕುಲಿಯಾನದಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಯನ್ನು ಸಹ ಉದ್ಘಾಟಿಸಲಿದ್ದಾರೆ. ೨ನೇ ದಿನ ಅವರು, ಪಹದ್ಪುರ್ ಗ್ರಾಮದಲ್ಲಿ ಕೌಶಲ್ಯ ತರಬೇತಿ ಕೇಂದ್ರವನ್ನು ಉದ್ಘಾಟಿಸಿಲಿದ್ದು, ಬಳಿಕ ಬದಮ್ಪಹಾರ್ ರೈಲು ನಿಲ್ದಾಣದಲ್ಲಿ ಮೂರು ಹೊಸ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ರಾಯರಂಗ್ಪುರ್ ಹೊಸ ವಿಭಾಗೀಯ ಅಂಚೆ ಕಚೇರಿ ಉದ್ಘಾಟಿಸಿ, ಸ್ಮರಣಾರ್ಥ ಲಕೋಟೆ ಬಿಡುಗಡೆ ಮಾಡಲಿದ್ದಾರೆ. ಬದಮ್ಪಹಾರ್ ರೈಲು ನಿಲ್ದಾಣದ ಮರು ಅಭಿವೃದ್ಧಿಗೂ ಅವರು, ಇದೇ ವೇಳೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಒಡಿಶಾದ ಬುರ್ಲಾದಲ್ಲಿರುವ ವೀರ್ ಸುರೇಂದ್ರ ಸಾಯಿ ತಂತ್ರಜ್ಞಾನ ವಿಶ್ವವಿದ್ಯಾಲಯದ ೧೫ನೇ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಬುಧವಾರದಂದು ರಾಷ್ಟ್ರಪತಿ ನವಭಾರತಕ್ಕಾಗಿ ನೂತನ ಶಿಕ್ಷಣ ಎಂಬ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಆಂಧ್ರಪ್ರದೇಶದ ಪುಟ್ಟಪರ್ತಿಗೆ ಭೇಟಿ ನೀಡಿ, ಶ್ರೀ ಸತ್ಯಸಾಯಿ ಉನ್ನತ ಕಲಿಕಾ ಸಂಸ್ಥೆಯ ೪೨ನೇ ಘಟಿಕೋತ್ಸವ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
