
ನವದೆಹಲಿ, 4 ಡಿಸೆಂಬರ್(ಹಿ.ಸ):
ಆ್ಯಂಕರ್ :
ಭಾರತದ ಐದು ರಾಜ್ಯಗಳಲ್ಲಿ ನಡೆದ ಚುನಾವಣೆಗಳ ಪೈಕಿ ನಾಲ್ಕು ವಿಧಾನಸಭಾ ಚುನಾವಣೆಗಳ ಫಲಿತಾಂಶ ಹೊರಬಿದ್ದಿದೆ. ಫಲಿತಾಂಶದ ನಂತರ ದೇಶ ವಿದೇಶಗಳಲ್ಲಿ ಸಂಚಲನ ಸೃಷ್ಟಿಸಿದೆ. ಉತ್ತರಭಾರತದ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವನ್ನು ವಿದೇಶಿ ಮಾಧ್ಯಮಗಳ ವಿಭಿನ್ನವಾಗಿ ವಿಶ್ಲೇಷಣೆ ಮಾಡಿವೆ. ವಿದೇಶಿ ಮಾಧ್ಯಮಗಳು ಬಿಜೆಪಿಯನ್ನು ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಹಾಡಿಕೊಂಡಾಡಿವೆ. ಕೆಲವು ಮಾಧ್ಯಮಗಳು ಫಲಿತಾಂಶಗಳನ್ನು 2024 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಗೆಲುವು ಎಂದು ಭವಿಷ್ಯ ನುಡಿದರೆ, ಕೆಲವು ಮಾಧ್ಯಮಗಳು ಫಲಿತಾಂಶವನ್ನು ವಿರೋಧ ಪಕ್ಷಗಳ ಒಕ್ಕೂಟ ಮೈತ್ರಿಗೆ ದೊಡ್ಡ ಹೊಡೆತ ಎಂದೆ ಕರೆದಿವೆ. ಹಾಗಾದ್ರೆ ಚುನಾವಣಾ ಫಲಿತಾಂಶದ ಬಗ್ಗೆ ವಿದೇಶಿ ಮಾಧ್ಯಮಗಳು ಏನು ಹೇಳಿವೆ .
ಹಿಂದೂಸ್ತಾನ್ ಸಮಾಚಾರ್
