ನವದೆಹಲಿ,17ನವೆಂಬರ್ (ಹಿ.ಸ):
ಆ್ಯಂಕರ್ :ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದು ಇಂದುನ ಚಂಡಮಾರುತವಾಗಿ ಪರಿವರ್ತನೆ ಆಗುವ ಸಾಧ್ಯತೆ ಇದೆ ಹಾಗೂ ಬಾಂಗ್ಲಾದೇಶದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಇದರ ಪರಿಣಾಮ ಒಡಿಶಾ ಹಾಗೂ ಬಂಗಾಳ ಕರಾವಳಿ ಭಾಗಗಳಲ್ಲಿ ಗುರುವಾರವೇ ಮೋಡ ಕವಿದ ವಾತಾವರಣವಿದ್ದು, ಆಗಾಗ ಮಳೆಯಾಗುತ್ತಿದೆ.
ಗುರುವಾರದಂದು ವಾಯುಭಾರ ಕುಸಿತವು ಗಂಟೆಗೆ 17 ಕಿ.ಮೀ. ವೇಗದಲ್ಲಿ ಈಶಾನ್ಯಕ್ಕೆ ಚಲಿಸುತ್ತಿದೆ. ಇದು ಗುರುವಾರ ಬೆಳಗ್ಗೆ 8.30 ಗಂಟೆಗೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಆಗ್ನೇಯಕ್ಕೆ 390 ಕಿಮೀ ದೂರದಲ್ಲಿ ಮತ್ತು ಒಡಿಶಾದ ಪಾರಾದೀಪ್ನಿಂದ ಆಗ್ನೇಯಕ್ಕೆ 320 ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿದೆ. ಇದು ಶುಕ್ರವಾರ ಚಂಡಮಾರುತವಾಗಿ ಪರಿವರ್ತನೆಗೊಂಡು ಮತ್ತಷ್ಟು ಈಶಾನ್ಯದತ್ತ ಸಾಗಿ ಗಂಟೆಗೆ 75 ಕಿ.ಮೀ. ವೇಗದಲ್ಲಿ ಬಾಂಗ್ಲಾದೇಶದ ಮೋಂಗ್ಲಾ ಹಾಗೂ ಖೇಪುಪಾರಾ ಕರಾವಳಿ ಮಧ್ಯೆ ಅಪ್ಪಳಿಸಲಿದೆ ಎಂದು ಅದು ಹೇಳಿದೆ.
ಹಿಂದೂಸ್ತಾನ್ ಸಮಾಚಾರ್
