• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > National > ಪ್ರಾಚೀನ ಶಾಸ್ತ್ರಗಳ ಸಂರಕ್ಷಣೆ ಅವಶ್ಯಕ : ಏಕನಾಥ್ ಶಿಂಧೆ
National

ಪ್ರಾಚೀನ ಶಾಸ್ತ್ರಗಳ ಸಂರಕ್ಷಣೆ ಅವಶ್ಯಕ : ಏಕನಾಥ್ ಶಿಂಧೆ

CliQ INDIA
Last updated: June 30, 2025 4:15 am
CliQ INDIA
Share
3 Min Read
SHARE

ವಾರಣಾಸಿ, 29 ಜೂನ್ (ಹಿ.ಸ.) :

ಆ್ಯಂಕರ್ : ಭಾರತವು ಜ್ಞಾನಾಧಾರಿತ ವಿಶ್ವ ನಾಯಕನಾಗಬೇಕೆಂಬ ಗುರಿ ಸಾಧಿಸಲು ತನ್ನ ಪೌರಾಣಿಕ ಶಾಸ್ತ್ರಗಳು, ವೇದಗಳು, ಉಪನಿಷತ್ತುಗಳು ಮತ್ತು ಪುರಾಣಗಳಲ್ಲಿ ಅಡಗಿರುವ ಅಪಾರ ಜ್ಞಾನ ಭಂಡಾರವನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವು ಅತ್ಯವಶ್ಯಕವಾಗಿದೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅವರು ವಿವರಿಸಿದಂತೆ, ಕಾಶಿಯಲ್ಲಿ ಪ್ರಾರಂಭಗೊಂಡಿರುವ ದೇಶದ ಮೊದಲ ‘ಶಾಸ್ತ್ರ ವಸ್ತುಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರ’ ಈ ದೃಷ್ಟಿಕೋಣವನ್ನು ರೂಪಗೊಳಿಸುವ ದಿಕ್ಕಿನಲ್ಲಿ ಇಟ್ಟಿರುವ ಐತಿಹಾಸಿಕ ಹೆಜ್ಜೆಯಾಗಿದ್ದು, ಇವು ಭವಿಷ್ಯದ ಭಾರತಕ್ಕೆ ಅಸ್ತಿತ್ವ ನೀಡುವ ವೇದಿಕೆಯಾಗಿ ಪರಿಣಮಿಸಲಿದೆ ಎಂದರು.

ಶಾಸ್ತ್ರಗಳು – ಜ್ಞಾನದ ಮೂಲ ಭಂಡಾರ

ನಮ್ಮ ಶಾಸ್ತ್ರಗಳು ಕೇವಲ ಧಾರ್ಮಿಕ ಗ್ರಂಥಗಳಲ್ಲ. ಅವುಗಳಲ್ಲಿ ವಿಜ್ಞಾನ, ತತ್ವಶಾಸ್ತ್ರ, ಜೀವನಶೈಲಿ, ಸಂಸ್ಕೃತಿ – ಎಲ್ಲವನ್ನೂ ಒಳಗೊಂಡಿರುವ ಆಳವಿದೆ. ಅವುಗಳನ್ನು ಉಳಿಸದಿದ್ದರೆ, ಮುಂದಿನ ಪೀಳಿಗೆಗೆ ಭಾರತವೇ ಅರ್ಥವಿಲ್ಲದ ತತ್ವವಾಗುತ್ತದೆ. ಭಾರತವು ಜ್ಞಾನವನ್ನು ಆಧಾರವನ್ನಾಗಿ ಮಾಡಿಕೊಂಡು ಮುಂದುವರಿಯಬೇಕೆಂದರೆ, ಆ ಜ್ಞಾನ ಮೂಲಗಳನ್ನು ಉಳಿಸಬೇಕು ಎಂದರು.

ಡಿಜಿಟಲೀಕರಣ ಮತ್ತು ಸಂಶೋಧನೆಗೆ ಸಮರ್ಪಿತ ಕೇಂದ್ರ

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಸ್ಥಾಪಿತವಾದ ಈ ಕೇಂದ್ರವು, ಶಾಸ್ತ್ರಗಳನ್ನು ಡಿಜಿಟಲೀಕರಣಗೊಳಿಸಿ ಸಂಶೋಧನೆಗೆ ಉತ್ತೇಜನ ನೀಡಲಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿಕೊಂಡು ಈ ಪಾಠಗಳನ್ನು ಹಲವು ಭಾರತೀಯ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡುವ ಯೋಜನೆ ನಡೆಯುತ್ತಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವಿಷಯಕ್ಕೆ ಕೇಂದ್ರ ಬಜೆಟ್‌ನಲ್ಲಿ ವಿಶೇಷ ನಿಬಂಧನೆ ಘೋಷಿಸಿರುವುದನ್ನು ಶಿಂಧೆ ಅವರು ಉಲ್ಲೇಖಿಸಿದರು.

ಥಾಣೆ ಜಿಲ್ಲೆಯಿಂದ ಆರಂಭ

ಮಹಾರಾಷ್ಟ್ರದ ಥಾಣೆ ಜಿಲ್ಲೆ ಈ ಯೋಜನೆಯ ಆರಂಭಿಕ ಕೇಂದ್ರವಾಗಿದ್ದು, ಅಲ್ಲಿನ ಪೌರಸ್ತ್ಯ ಶಾಸ್ತ್ರಜ್ಞ ಡಾ. ಬೇಡೇಕರ್ ಅವರ ಬಳಿ ಇರುವ 60,000 ಕ್ಕೂ ಹೆಚ್ಚು ಅಪರೂಪದ ಶಾಸ್ತ್ರ ಗ್ರಂಥಗಳ ಸಂಗ್ರಹವು ಈ ಕಾರ್ಯದ ಮುಖ್ಯ ಆಧಾರವಾಗಿದೆ. ಗುರುಪೂರ್ಣಿಮೆಯಂದು ಈ ಕಾರ್ಯವನ್ನು ಔಪಚಾರಿಕವಾಗಿ ಪ್ರಾರಂಭಿಸಲಾಗುತ್ತಿದೆ‌ ಎಂದು ತಿಳಿಸಿದರು.

ಥಾಣೆ ಜಿಲ್ಲೆ ಸಂತರ ನಾಡು. ಈ ನಾಡಿನಲ್ಲಿ ಭಾರತಕ್ಕೆ ತೇಜಸ್ಸು ನೀಡುವ ಅನೇಕ ಶಾಸ್ತ್ರಗಳು ಮನೆ ಮಾಡಿವೆ. ಈ ಧಾಟಿಯಲ್ಲಿ ಅಭಿಯಾನ ಆರಂಭವಾಗುವುದು ವಿಶೇಷವಾದುದು, ಎಂದು ಅವರು ಹೇಳಿದರು.

ಯುವಕರ ಪಾಲು ನಿರ್ಣಾಯಕ

ಈ ಕಾರ್ಯದಲ್ಲಿ ಯುವಶಕ್ತಿ ನಿರ್ಣಾಯಕವಾಗಿದ್ದು, ಸಂಸ್ಕೃತಿಯ ಅರಿವು ಮತ್ತು ಅಧ್ಯಯನದ ಉತ್ಸಾಹ ಅವರಿಂದಲೇ ಸಾಧ್ಯ ಎಂದು ಶಿಂಧೆ ಅಭಿಪ್ರಾಯಪಟ್ಟರು.

ಯುವಕರು ಶಾಸ್ತ್ರ ಜ್ಞಾನವನ್ನು ಅರ್ಥಮಾಡಿಕೊಂಡು, ಅದನ್ನು ಇತರರಿಗೂ ತಲುಪಿಸಲು ಶ್ರಮಿಸಿದಾಗ ಮಾತ್ರ ಈ ಜ್ಞಾನ ಸಜೀವವಾಗಿರುತ್ತದೆ. ಭಾರತವು ಯುವ ರಾಷ್ಟ್ರ. ಯುವಕರ ಶಕ್ತಿಯೇ ಜ್ಞಾನಭರಿತ ಭಾರತಕ್ಕೆ ಹಾದಿ ತೆರೆಯುತ್ತದೆ.

ಆರ್‌ಎಸ್‌ಎಸ್‌ನ ಪಾತ್ರ ಶ್ಲಾಘನೀಯ

ಈ ಉಪಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನೀಡುತ್ತಿರುವ ಬೆಂಬಲವನ್ನು ಶಿಂಧೆ ವಿಶೇಷವಾಗಿ ಸ್ಮರಿಸಿದರು. ಸಂಘವು ದೇಶಭಕ್ತಿ ಮತ್ತು ಸಾಂಸ್ಕೃತಿಕ ಜಾಗೃತಿಗೆ ಶ್ರಮಿಸುತ್ತಿದ್ದು, ಶಾಸ್ತ್ರ ಸಂರಕ್ಷಣೆಯನ್ನು ಧರ್ಮ ಕಾರ್ಯವೆಂದು ನೋಡುತ್ತಿದೆ ಎಂದು ಅವರು ಹೇಳಿದರು. ಈ ವರ್ಷ ಸಂಘದ ಶತಮಾನೋತ್ಸವವಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಗತೀಕರಣ ವಿಶೇಷ ಮಹತ್ವ ಹೊಂದಿದೆ ಎಂದು ಅವರು ತಿಳಿಸಿದರು.

ಶಿಕ್ಷಣ ನೀತಿಯಲ್ಲಿ ಶಾಸ್ತ್ರ ಪಾಠ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ವೇದ, ಉಪನಿಷತ್ ಮುಂತಾದ ಶಾಸ್ತ್ರಪಾಠಗಳನ್ನು ಶಾಲಾ ಮಕ್ಕಳಿಗೆ ಸುಲಭವಾಗಿ ಅರಿಯುವ ರೀತಿಯಲ್ಲಿ ಪಾಠ್ಯಕ್ರಮದಲ್ಲಿ ಅಳವಡಿಸಲು ಪ್ರಸ್ತಾವನೆ ಸಿದ್ಧವಾಗುತ್ತಿದೆ. ಬಾಲ್ಯದಲ್ಲಿಯೇ ಸಾಂಸ್ಕೃತಿಕ ಪ್ರಜ್ಞೆ ಬೆಳೆಸುವ ಪ್ರಯತ್ನವಿದು ಎಂದು ಶಿಂಧೆ ವಿವರಿಸಿದರು.

ಭಾರತಕ್ಕೆ ಭವಿಷ್ಯದ ದಿಕ್ಕು

ಈ ಉಪಕ್ರಮ ಕೇವಲ ವಸ್ತುಸಂಗ್ರಹಾಲಯ ನಿರ್ಮಾಣವಲ್ಲ. ಇದು ಭಾರತೀಯತೆಯ ಮೂಲಭೂತ ಪ್ರಜ್ಞೆ ಹಾಗೂ ವಿಜ್ಞಾನಪೂರಿತ ಚಿಂತನೆಗೆ ನೂತನ ಆಳತೆ ನೀಡುವ ಯೋಜನೆ. ಇದು ಭಾರತವನ್ನು ಪುನಃ ಜ್ಞಾನದಲ್ಲಿ ವಿಶ್ವನಾಯಕನನ್ನಾಗಿ ಮಾಡುವ ಉದ್ದೇಶದ ದಿಟ್ಟ ಹೆಜ್ಜೆ ಎಂದು ಏಕನಾಥ ಶಿಂಧೆ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa

You Might Also Like

ಬಿಹಾರದಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ – Hindusthan Samachar Kannada
ಡಿ. 6–7ರಂದು ಚಿಖ್ಲಿಯಲ್ಲಿ ರಾಷ್ಟ್ರೀಯ ಸೇವೆಯ ‘ಅಖಂಡ ಸಾಧನಾ ಉತ್ಸವ’
ಉಧಂಪುರ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರಿಗಾಗಿ ಶೋಧ
ಉತ್ತರ ಭಾರತದಲ್ಲಿ ಭಾರೀ ಬಿಸಿಲು; ನಾಗ್ಪುರದಲ್ಲಿ 56 ಡಿಗ್ರಿ ಸೆಲ್ಸಿಯಸ್ ತಾಪಮಾನ?
ಅಂಡಮಾನ್–ನಿಕೋಬಾರ್ ದ್ವೀಪಗಳಿಗೆ ಡಾ. ಮೋಹನ್ ಭಾಗವತ್ ಭೇಟಿ

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ಯುಜಿಸಿ-ನೆಟ್ ಮತ್ತು ಕೆ-ಸೆಟ್ ಪರೀಕ್ಷೆಗಳಿಗೆ ತರಬೇತಿ
Next Article ನಾನಾ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?