ಗಾಂಧಿನಗರ್, 8 ಜನವರಿ(ಹಿ.ಸ):
ಆ್ಯಂಕರ್ :ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದಿನಿಂದ ಮೂರು ದಿನ ಗುಜರಾತ್ಗೆ ಭೇಟಿ ನೀಡಲಿದ್ದಾರೆ. ಮಂಗಳವಾರದಂದು ಗಾಂಧಿನಗರದ ಮಹಾತ್ಮಾಮಂದಿರದಲ್ಲಿ ವಿಶ್ವನಾಯಕರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಬಳಿಕ ಅಗ್ರ ಜಾಗತಿಕ ಕಂಪನಿಗಳ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅವರು ಅದೇ ದಿನ ವೈಬ್ರಂಟ್ ಗುಜರಾತ್ ಗ್ಲೋಬಲ್ ಟ್ರೇಡ್ ಶೋ ಉದ್ಘಾಟಿಸಲಿದ್ದಾರೆ. ಬುಧವಾರದಂದು ಜಾಗತಿಕ ಶೃಂಗಸಭೆಯಲ್ಲಿ ಪಾಲ್ಗೊಂಡು ಬಳಿಕ ಪ್ರಮುಖ ಉದ್ದಿಮೆಗಳ ನಾಯಕರೊಂದಿಗೆ ಚರ್ಚಿಸಲು ಗುಜರಾತ್ ಅಂತಾರಾಷ್ಟ್ರೀಯ ಆರ್ಥಿಕ ಟೆಕ್ ಸಿಟಿಗೆ ಭೇಟಿ ನೀಡಲಿದ್ದಾರೆ. ಮೂರು ದಿನಗಳ ಈ ಜಾಗತಿಕ ಶೃಂಗ ಸಭೆಯು ತನ್ನ ೧೦ನೇ ಆವೃತ್ತಿಯನ್ನು ಈ ತಿಂಗಳ ೧೦ರಿಂದ ಭವಿಷ್ಯದ ದಾರಿದೀಪ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಿದೆ. ೩೪ ಪಾಲುದಾರ ರಾಷ್ಟ್ರಗಳು ಮತ್ತು ೧೬ ಪಾಲುದಾರಿಕಾ ಸಂಸ್ಥೆಗಳು ಈ ಸಂದರ್ಭದಲ್ಲಿ ವಿಚಾರ ಸಂಕಿರಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿವೆ.
ಹಿಂದೂಸ್ತಾನ್ ಸಮಾಚಾರ್
