ನವದೆಹಲಿ, 5 ನವೆಂಬರ್ (ಹಿ.ಸ):
ಆ್ಯಂಕರ್ :೨೦೨೪ರ ಲೋಕಸಭಾ ಚುನಾವಣೆಯ ಫಲಿತಾಂಶವು ಎಲ್ಲ ಅಡೆತಡೆಗಳನ್ನು ಮೀರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿಯಲ್ಲಿ ಲೀಡರ್ ಶಿಪ್ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಜನರು ಎಲ್ಲಾ ಅಡೆತಡೆಗಳನ್ನು ದಾಟಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದರು.
ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಲು ತಮ್ಮ ಸರ್ಕಾರ ಅನೇಕ ಅಡೆತಡೆಗಳನ್ನು ದಾಟಿದೆ. ಬಡತನದ ವಿರುದ್ಧ ಕೇವಲ ಘೋಷಣೆಗಳಿಂದ ಹೋರಾಡಲು ಸಾಧ್ಯವಿಲ್ಲ, ಆದರೆ ಪರಿಹಾರಗಳಿಂದ ಸಾಧ್ಯವಿದೆ ಎಂದು ಪ್ರತಿಪಾದಿಸಿದ ಅವರು, ಕಳೆದ ಐದು ವರ್ಷಗಳಲ್ಲಿ ಸರ್ಕಾರ ಬಡವರ ಜೀವನವನ್ನು ಪರಿವರ್ತಿಸುವುದರ ಜತೆಗೆ ಬಡತನವನ್ನು ನಿವಾರಿಸಲು ನೆರವು ನೀಡಿದೆ ಎಂದರು.
ತಮ್ಮ ಸರ್ಕಾರದ ಉತ್ತಮ ಆರ್ಥಿಕ ನೀತಿಗಳು ದೇಶದಲ್ಲಿ ಪ್ರಗತಿಯ ಹೊಸ ಮಾರ್ಗಗಳನ್ನು ತೆರೆದಿವೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ ೨೦೨೩ ರಲ್ಲಿ ದ್ವಿಗುಣಗೊಂಡು ೧೦ ವರ್ಷಗಳಲ್ಲಿ ಏಳೂವರೆ ಕೋಟಿಗೆ ತಲುಪಿದೆ. ಕ್ರೀಡೆ, ನವೋದ್ಯಮಗಳು, ಬಾಹ್ಯಾಕಾಶ, ತಂತ್ರಜ್ಞಾನ ಸೇರಿದಂತೆ ಪ್ರತಿಯೊಂದು ಅಭಿವೃದ್ಧಿಯ ಪಯಣದಲ್ಲಿ ದೇಶದ ಮಧ್ಯಮ ವರ್ಗ ಮುಂಚೂಣಿಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
