ಮುಂಬೈ , 16ನವೆಂಬರ್ (ಹಿ.ಸ):
ಆ್ಯಂಕರ್ :
ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಮನೋಜ್ ಜಾರಂಗೆ ಪಾಟೀಲ್ ಚಳವಳಿ ಆರಂಭಿಸಿದ್ದಾರೆ. ಮರಾಠಾ ಮೀಸಲಾತಿ ಆಂದೋಲನದ ಅಂಗವಾಗಿ ರಾಜ್ಯ ಪ್ರವಾಸ ಕೈಗೊಂಡಿರುವ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಅವರು ಡಿಸೆಂಬರ್ 24 ರೊಳಗೆ ಸಮುದಾಯಕ್ಕೆ ಮೀಸಲಾತಿಯನ್ನು ಸರ್ಕಾರ ಘೋಷಿಸಬೇಕು ಎಂದು ಒತ್ತಾಯಿಸಿದರು.
ಧಾರಾಶಿವ್ನ ವಾಶಿ ಗ್ರಾಮದಲ್ಲಿ ರ್ಯಾಲಿಯೊಂದಿಗೆ ಪ್ರಾರಂಭವಾದ ಪ್ರವಾಸವು ಡಿಸೆಂಬರ್ 24 ರಂದು ಅಹ್ಮದ್ನಗರ ಜಿಲ್ಲೆಯ ಶೆಗಾಂವ್ನಲ್ಲಿ ಮುಕ್ತಾಯಗೊಳ್ಳಲಿದೆ – ಎಲ್ಲಾ ಮರಾಠರಿಗೆ ಕುಣಬಿ ಜಾತಿ ಪ್ರಮಾಣಪತ್ರಗಳನ್ನು ನೀಡಲು ಡಿಸೆಂಬರ್ 24ರವರೆಗೆ ಗಡುವು ನೀಡಿದ್ದಾರೆ.
ಪ್ರವಾಸವು ಕೊಂಕಣ ಮತ್ತು ಪಶ್ಚಿಮ ಮಹಾರಾಷ್ಟ್ರದ ಭಾಗಗಳನ್ನು ಒಳಗೊಂಡಿದೆ. ಪ್ರವಾಸ ಆರಂಭಿಸಿದ ಪಾಟೀಲ್, ಡಿಸೆಂಬರ್ 24 ರೊಳಗೆ ಸರ್ಕಾರ ಮೀಸಲಾತಿ ಪ್ರಕಟಿಸಬೇಕು, ನಮಗೆ ಮೀಸಲಾತಿ ನೀಡುವವರೆಗೆ ನಾವು ಸುಮ್ಮನಿರುವುದಿಲ್ಲ ಎಂದಿದ್ದಾರೆ. ರಾಜ್ಯಾದ್ಯಂತ ಪ್ರವಾಸವು ಮೂರು ಹಂತಗಳಲ್ಲಿ ನಡೆಯಲಿದೆ. ಒಂಬತ್ತು ದಿನಗಳ ಮೊದಲ ಹಂತವು ಇಂದು ಪ್ರಾರಂಭವಾಗಲಿದೆ ಎಂದು ಜಾರಂಗೆ ಪಾಟೀಲ್ ಆಪ್ತರು ತಿಳಿಸಿದ್ದಾರೆ.
ಪಾಟೀಲ್ರ ಬೆಂಬಲಿಗರ ಪ್ರಕಾರ ಪ್ರವಾಸದ ವೇಳೆ ಮರಾಠಾ ಸಮುದಾಯದವರನ್ನು ಭೇಟಿ ಮಾಡಿ ಅವರ ಜತೆ ಸಂವಾದ ನಡೆಸಿ ಆತ್ಮವಿಶ್ವಾಸ ಹೆಚ್ಚಿಸಲಿದ್ದಾರೆ. ಸಮುದಾಯಕ್ಕೆ ಮೀಸಲಾತಿ ಸಿಗುತ್ತದೆ ಎಂಬ ನಂಬಿಕೆಯನ್ನೂ ಅವರಲ್ಲಿ ಮೂಡಿಸಲಿದ್ದು, ಸರಕಾರ ಕೋಟಾ ನೀಡದ ಹೊರತು ಆಂದೋಲನ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
