ಕೋಲ್ಕತ್ತಾ,, 12 ಜನವರಿ(ಹಿ.ಸ):
ಆ್ಯಂಕರ್ :
ಪಶ್ಚಿಮ ಬಂಗಾಳದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಚಿವ ಸುಜಿತ್ ಬೋಸ್, ಟಿಎಂಸಿ ಶಾಸಕ ತಪಸ್ ರಾಯ್ ಮತ್ತು ಉತ್ತರ ದಮ್ಡಮ್ ಪುರಸಭೆಯ ಮಾಜಿ ಅಧ್ಯಕ್ಷ ಸುಬೋಧ ಚಕ್ರವರ್ತಿ ಅವರ ನಿವಾಸಗಳ ಮೇಲೆ ಇಂದು ಬೆಳಿಗ್ಗೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ.
ಕೇಂದ್ರ ಪಡೆಗಳ ಜೊತೆಯಲ್ಲಿ ಜಾರಿ ನಿರ್ದೇಶನಾಲಯದ ಅಕಾರಿಗಳು ಇಂದು ಮುಂಜಾನೆ ಉತ್ತರ 24 ಪರಗಣ ಜಿಲ್ಲೆಯ ಲೇಕ್ ಟೌನ್ ಪ್ರದೇಶದಲ್ಲಿ ಬೋಸ್ ಅವರ ಎರಡು ನಿವಾಸಗಳ ಮೇಲೆ ದಾಳಿ ನಡೆಸಿದರು ಎಂದು ತಿಳಿದುಬಂದಿದೆ. ಕೇಂದ್ರ ಏಜೆನ್ಸಿ ಅಧಿಕಾರಿಗಳು ತಪಸ್ ರಾಯ್ ಅವರ ಬಿಬಿ ಗಂಗೂಲಿ ಸ್ಟ್ರೀಟ್ ನಿವಾಸ ಮತ್ತು ಬಿರಾಟಿಯಲ್ಲಿರುವ ಚಕ್ರವರ್ತಿ ಅವರ ನಿವಾಸದ ಮೇಲೂ ದಾಳಿ ನಡೆಸಿದ್ದಾರೆ ಎಂದು ಅವರು ಹೇಳಿದರು.
ನಾಗರಿಕ ಸಂಸ್ಥೆಗಳಲ್ಲಿನ ನೇಮಕಾತಿಗೆ ಸಂಬಂಧಿಸಿದಂತೆ ನಾವು ಮೂವರು ಟಿಎಂಸಿ ನಾಯಕರ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದೇವೆ. ನಾವು ನಾಯಕರೊಂದಿಗೂ ಮಾತನಾಡುತ್ತಿದ್ದೇವೆ ಎಂದು ಇಡಿ ಅಧಿಕಾರಿ ಪಿಟಿಐಗೆ ತಿಳಿಸಿದರು. ಸ್ಥಳೀಯ ಪೊಲೀಸ್ ಠಾಣೆಗಳ ಪೊಲೀಸ್ ಸಿಬ್ಬಂದಿ ಆಯಾ ಸ್ಥಳಗಳಿಗೆ ತಲುಪಿ ಇಡೀ ಪ್ರದೇಶವನ್ನು ಸುತ್ತುವರಿದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
