
ಶ್ರೀನಗರ, 13ಡಿಸೆಂಬರ್(ಹಿ.ಸ):
ಆ್ಯಂಕರ್ :
: ಸೇನಾ ಘಟಕದ ಕಾವಲಿಗೆ ನೇಮಿಸಿದ್ದ ಅಗ್ನಿವೀರರೊಬ್ಬರು ಗುಂಡಿನ ಗಾಯಗಳಿಂದ ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ನಲ್ಲಿ ಸಂಭವಿಸಿದೆ.
ಅಗ್ನಿವೀರನ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿಲ್ಲ. ಅಗ್ನಿವೀರ್ಗೆ ಹೇಗೆ ಗುಂಡು ತಗುಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಆತನ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿಸಲ್ಪಟ್ಟಿದೆಯೇ? ಅಥವಾ ಆತ್ಮಹತ್ಯೆಯೇ? ಅಥವಾ ಘಟಕದೊಳಗೆ ಇದ್ದ ಬೇರೆಯ ಸಿಬ್ಬಂದಿಯಿಂದ ಗುಂಡು ಹಾರಿಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
