ದೆಹಲಿ, 20 ಜನವರಿ(ಹಿ.ಸ):
ಆ್ಯಂಕರ್ :
ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಅಸ್ಸಾಂನ ಸೋನಿತ್ಪುರ್ ಜಿಲ್ಲೆಯ ಸಲೋನಿಬರಿಯಲ್ಲಿ ಎಸ್ ಎಸ್ ಬಿಯ ೬೦ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಅವರು, ಗುವಾಹತಿಯಲ್ಲಿ ಅಸ್ಸಾಂ ಪೊಲೀಸ್ ಕಮಾಂಡೋದ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಎರಡು ಸಾವಿರದ ೫೦೦ಕ್ಕೂ ಹೆಚ್ಚು ಕಮಾಂಡೋಗಳು ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ದೇಕಿಯಾಜುಲಿ ಜಿಲ್ಲೆಯಲ್ಲಿ ಅಲ್ಬಾತು ಮಹಾಸಾಬ್ ತ್ರೈವಾರ್ಷಿಕ ಸಮ್ಮೇಳನದಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದು, ಸುಮಾರು ಒಂದು ಲಕ್ಷ ಜನರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಹಿಂದೂಸ್ತಾನ್ ಸಮಾಚಾರ್
