
ಪಣಜಿ,24ನವೆಂಬರ್ (ಹಿ.ಸ):
ಆ್ಯಂಕರ್ :
ಗೋವಾದಲ್ಲಿ ನಡೆಯುತ್ತಿರುವ ೫೪ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇಂದಿನಿಂದ ಮಿಡ್ಫೆಸ್ಟ್ ಆರಂಭವಾಗಲಿದೆ.
ಚಲನಚಿತ್ರೋತ್ಸವ ಆರಂಭವಾಗಿ ಅರ್ಧಭಾಗ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮಿಡ್ ಫೆಸ್ಟ್ ಆರಂಬಿಸಲಾಗುತ್ತಿದೆ. ಇದರ ಅಂಗವಾಗಿ ಟರ್ಕಿ ಭಾಷೆಯ ನೂರಿ ಬಿಲ್ಗೆ ಸೆಯ್ಲಾನ್ ಅವರ ನಿರ್ದೇಶನದ “ಅಬೌಟ್ ಡ್ರೈ ಗ್ರಾಸೆಸ್” ಚಲನಚಿತ್ರ ಪ್ರದರ್ಶನವಾಗಲಿದೆ.
ಆಕರ್ಷಕ ಕಥಾ ಹಂದರ ಮತ್ತು ಮನೋಜ್ಞ ಅಭಿನಯಕ್ಕೆ ಈ ಚಿತ್ರ ಖ್ಯಾತಿ ಪಡೆದಿದ್ದು, ಜಾಗತಿಕ ಮೆಚ್ಚುಗೆಗೆ ಕಾರಣವಾಗಿದೆ. ಕಾನ್ ಚಿತ್ರೋತ್ಸವ ೨೦೨೩ರಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಈ ಚಿತ್ರ ಪಾತ್ರವಾಗಿದೆ. ಅಬೌಟ್ ಡ್ರೈ ಗ್ರಾಸೆಸ್ ಚಿತ್ರ ಪಣಜಿಯ ಐನಾಕ್ಸ್ ಸ್ಕ್ರೀನ್-೧ ರಲ್ಲಿ ಸಂಜೆ ೫.೩೦ಕ್ಕೆ ಪ್ರದರ್ಶನವಾಗಲಿದೆ. ಈ ಸಂದರ್ಭದಲ್ಲಿ ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಗೌರವಿಸಲಾಗುತ್ತದೆ. ಹಳ್ಳಿಯೊಂದರಲ್ಲಿ ಯುವ ಶಿಕ್ಷಕರೊಬ್ಬರು ಕಡ್ಡಾಯ ಕರ್ತವ್ಯದ ಅವಧಿಯ ನಿರ್ವಹಣೆ ನಂತರ ತನ್ನ ಆಕಾಂಕ್ಷೆಗಳ ಸುತ್ತು ಕಥಾ ಹಂದರವನ್ನು ಹೊಂದಿದೆ. ನೀರಸ ಜೀವನದ ಹತಾಶೆಯಲ್ಲಿರುವ ನಾಯಕನ ದೃಷ್ಟಿಕೋನವನ್ನು ಸಹೋದ್ಯೋಗಿ ನುರೇ ಸಹಾಯದಿಂದ ಚಿತ್ರ ಅನಿರೀಕ್ಷಿತ ತಿರುವು ಪಡೆಯುತ್ತದೆ.
ಈ ಚಿತ್ರ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ಕಂಡು ಭಾರಿ ಜನಮನ್ನಣೆ ಗಳಿಸಿದೆ.
ಹಿಂದೂಸ್ತಾನ್ ಸಮಾಚಾರ್
