• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > National > ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ; ಗಣ್ಯಾತಿಗಣ್ಯರು ಭಾಗಿ
National

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ; ಗಣ್ಯಾತಿಗಣ್ಯರು ಭಾಗಿ

CliQ INDIA
Last updated: January 22, 2024 8:36 pm
CliQ INDIA
Share
3 Min Read
SHARE

ದೆಹಲಿ, 22 ಜನವರಿ(ಹಿ.ಸ):

ಆ್ಯಂಕರ್ :ಭಾರತೀಯರ ದಶಕಗಳ ಕನಸು ಇಂದು ಸಾಕಾರಗೊಂಡಿದ್ದು, ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಭ್ರಮಾಚರಣೆಗಳೊಂದಿಗೆ ನೆರವೇರಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ನಿಗದಿಯಾಗಿದ್ದ ಶುಭಅಭಿಜಿನ್ ಮುಹೂರ್ತದಲ್ಲಿ ರಾಮಲಲ್ಲಾನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿತು. ಚಿನ್ನ, ವಜ್ರವೈಡೂರ್ಯಗಳ ಆಭರಣಗಳಿಂದ ಅಲಂಕೃತಗೊಂಡಿದ್ದ ರಾಮಲಲ್ಲಾ ವಿರಾಜಮಾನ ಮೂರ್ತಿ ಕಣ್ಮನ ಸೆಳೆಯುತ್ತಿತ್ತು. ಗರ್ಭಗುಡಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲರಾದ ಆನಂದಿಬೆನ್, ಆರ್ಎಸ್ಎಸ್ ನ ಸರಸಂಘ ಚಾಲಕರಾದ ಮೋಹನ್ ಭಾಗವತ್, ಪೇಜಾವರ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸೇರಿದಂತೆ ಕೆಲವೇ ಮಂದಿ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾದರು. ದೇಶದ ವಿವಿಧ ಕ್ಷೇತ್ರಗಳ ಗಣ್ಯರನ್ನು ಈ ಸಮಾರಂಭಕ್ಕೆ ಆಹ್ವಾನಿಲಾಗಿತ್ತು. ಉದ್ಯಮಿಗಳಾದ ಸುನೀಲ್ ಮಿಥಲ್, ಅನಿಲ್ ಅಂಬಾನಿ, ಚಲನಚಿತ್ರ ನಟರಾದ ಅಮಿತಾಬ್ ಬಚ್ಚನ್, ರಜನೀಕಾಂತ್, ರಣಬೀರ್ ಕಪೂರ್, ಚಿರಂಜೀವಿ, ಮಾಧುರಿ ದೀಕ್ಷಿತ್, ಕತ್ರಿನಾಕೈಫ್, ಅಲಿಯಾಭಟ್, ಕಂಗನಾ ರಣಾವತ್, ರಿಷಬ್ ಶೆಟ್ಟಿ, ಕ್ರಿಡಾಪಟುಗಳಾದ ಸಚಿನ್ ತೆಂಡ್ಲೂಲ್ಕರ್, ಅನಿಲ್ ಕುಂಬ್ಳೆ, ಸೈನಾ ನೆಹ್ವಾಲ್, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ಗಣ್ಯಾತಿಗಣ್ಯರು ಪಾಲ್ಗೊಂಡಿದ್ದರು.

ದೇಶದ ಹಲವು ಮಠಮಾನ್ಯಗಳ ಸ್ವಾಮೀಜಿಗಳು, ಗಣ್ಯರು ಕಾರ್ಯಕ್ರಮವನ್ನು ಸಾಕ್ಷೀಕರಿಸಿದರು. ಪ್ರಾಣ ಪ್ರತಿಷ್ಠಾಪನಾ ಕಾರ್ಯದಲ್ಲಿ ಯಜಮಾನತ್ವ ವಹಿಸಿದ ಪ್ರಧಾನಿ ನರೇಂದ್ರ ಮೋದಿ, ಬಳಿಕ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದರು. ಭಾರತೀಯರ ದಶಕಗಳ ಕನಸು ಸಾಕಾರಗೊಂಡಿದ್ದಕ್ಕೆ ಧನ್ಯತಾಭಾವ ವ್ಯಕ್ತಪಡಿಸಿದ ಪ್ರಧಾನಮಂತ್ರಿ, ಹಲವಾರು ಕರಸೇವಕರ ತ್ಯಾಗ, ಬಲಿದಾನದ ಫಲವಾಗಿ ರಾಮಮಂದಿರ ಇಂದು ಸಾಕಾರಗೊಂಡಿದೆ ಎಂದರು. ಈ ಕ್ಷಣ ಅಲೌಕಿಕವಾಗಿದೆ. ರಾಮಲಲ್ಲಾನ ಆಶೀರ್ವಾದದ ಫಲವಾಗಿದೆ. ಈದಿನ ಹೊಸ ಕಾಲಚಕ್ರದ ಆರಂಭ ಎಂದು ಹೇಳಿದರು. ಎಲ್ಲಿ ರಾಮ ಕಾರ್ಯವಾಗಬೇಕೊ ಅಲ್ಲಿ ಹನುಮನ ಉಪಸ್ಥಿತಿ ಇರುತ್ತದೆ. ದೈವ ಸಂಕಲ್ಪದಿಂದಾಗಿ ಈ ಕಾರ್ಯ ನೆರವೇರಿದೆ ಎಂದರು. ರಾಮಮಂದಿರ ನಿರ್ಮಾಣಕ್ಕೆ ಇಷ್ಟು ಕಾಲವಾಗಿದ್ದಕ್ಕೆ ರಾಮನ ಕ್ಷಮೆಯಾಚಿಸುವುದಾಗಿ ಹೇಳಿದರು. ಭಾರತ ಸಂವಿಧಾನದ ಪ್ರಥಮ ಪುಟದಲ್ಲೇ ರಾಮನ ಚಿತ್ರವಿದೆ. ರಾಮಮಂದಿರವಾಗಿ ನ್ಯಾಯ ಒದಗಿಸಿದ ನ್ಯಾಯಾಲಕ್ಕೂ ಧನ್ಯಾವಾದ ಅರ್ಪಿಸುವುದಾಗಿ ನುಡಿದರು. ಇಂದು ಪ್ರತಿ ಮನೆಯಲ್ಲೂ ರಾಮಜ್ಯೋತಿ ಬೆಳಗಿ, ದೀಪಾವಳಿ ಆಚರಣೆ ಆಗಲಿದೆ. ರಾಮ ಚರಣ ಸ್ಪರ್ಶವಾಗಿದ್ದ ಪ್ರದೇಶಗಳಿಗೆ ತಾವು ಭೇಟಿ ನೀಡಿದ್ದನ್ನು ಸ್ಮರಿಸಿದ ಪ್ರಧಾನಿ, ಶ್ರೀರಾಮ ಭಾರತೀಯರ ಅಂತರ್ಮನದಲ್ಲಿ ಸ್ಥಾಪಿತವಾಗಿದ್ದಾರೆ ಎಂದು ಹೇಳಿದರು. ದೇಶವನ್ನು ಒಂದು ಸೂತ್ರದಲ್ಲಿ ಒಗ್ಗೂಡಿಸಲು ಇದಕ್ಕಿಂತ ಉತ್ತಮವಾಗಿದ್ದು ಮತ್ತೊಂದಿಲ್ಲ ಎಂದರು. ರಾಮನ ಆದರ್ಶಗಳು ಎಲ್ಲೆಡೆ ಒಂದೆಯಾಗಿದೆ ಎಂದು ಪ್ರಧಾನಿ, ಅಲ್ಪಸಂಖ್ಯಾತ ಕರಸೇವಕರ ಬಲಿದಾನಕ್ಕೆ ನಾವೆಲ್ಲರೂ ಋಣಿಯಾಗಿದ್ದೇವೆ. ಇದು ಕೇವಲ ವಿಜಯದ ಕ್ಷಣವಲ್ಲ, ವಿನಯದ ಕ್ಷಣವೂ ಹೌದು ಎಂದರು. ರಾಮಮಂದಿರ ನಿರ್ಮಾಣ, ಅಭಿವೃದ್ಧಿಯ ನಾಂದಿಯಾಗಿದೆ. ರಾಮ ವಿವಾದವಲ್ಲಿ ಸಮಾಧಾನ. ಇಂದು ವಿಶ್ವ ಸಂಭ್ರಮಿಸುತ್ತಿದ್ದು, ಇದರ ವ್ಯಾಪಕತೆಗೆ ಸಾಕ್ಷಿಯಾಗಿದೆ ಎಂದರು. ಈ ಮಂದಿರ ಮುಂದಿನ ಸಾವಿರ ವರ್ಷಗಳ ನಂತರದ ಭವ್ಯ ಭಾರತ ನಿರ್ಮಾಣಕ್ಕಾಗಿ ಎಲ್ಲರೂ ಪಣತೊಡಬೇಕೆಂದರು. ದೈವದಿಂದ ದೇಶ ನಿರ್ಮಾಣ ಸಾಧ್ಯವಾಗಲಿದೆ. ಇಂದು ನಿರಾಸಗೆ ಆಸ್ಪದವೇ ಇಲ್ಲ, ಸಶಕ್ತ ರಾಷ್ಟ್ರ ರೂಪಗೊಳ್ಳಬೇಕು ಎಂದರು. ಗುರಿ ಸತ್ಯವಾಗಿದ್ದರೆ. ಪ್ರಾಮಾಣಿಕ ಪ್ರಯತ್ನ ನಡೆದರೆ ಸಾಧನೆ ಸಾಧ್ಯವೆಂದರು. ಇದಕ್ಕೂ ಮುನ್ನ ಮಾತನಾಡಿದ ಗೋವಿಂದ ದೇವಗಿರಿ ಸ್ವಾಮಿಜಿ, ಪ್ರಾಣಪ್ರತಿಷ್ಠಾಪನೆಯಲ್ಲಿ ಯಜಮಾನತ್ವ ವಹಿಸಿದ ಪ್ರಧಾನಮಂತ್ರಿ ನರೇಂದ್ರಯವರು, ಇದಕ್ಕಾಗಿ ಕಠಿಣ ವ್ರತಾಚಾರಣೆ ಮಾಡಿದ್ದನ್ನು ಸ್ಮರಿಸಿ ಶ್ಲಾಘಿಸಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿ, ೫೦೦ ವರ್ಷಗಳ ಬಳಿಕ ಸಾಕಾರಗೊಂಡ ಈ ಕ್ಷಣಗಳನ್ನು ವರ್ಣಿಸಲು ಪದಗಳೇ ಸಾಲುತ್ತಿಲ್ಲ. ದೇಶದ ತುಂಬೆಲ್ಲಾ ರಾಮನಾಮ ಅನುಕರಣಿಸುತ್ತಿದೆ ಎಂದರು. ಎಲ್ಲಿ ಮಂದಿರ ಸ್ಥಾಪನೆಯಾಗಬೇಕೆಂಬ ಸಂಕಲ್ಪ ಮಾಡಲಾಗಿತ್ತೋ ಅಂದೇ ಜಾಗದಲ್ಲಿ ಇಂದು ರಾಮಮಂದಿರ ತಲೆ ಎತ್ತಿ ನಿಂತಿದೆ. ಎಲ್ಲ ಮನಸ್ಸಿನಲ್ಲಿ ಇರುವ ರಾಮನ ಚಿತ್ರಕ್ಕೆ ಮೂರ್ತ ಸ್ವರೂಪ ನೀಡಿದ ಶಿಲ್ಪಿಯ ಕಾರ್ಯವು ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅನಾದರಣೆ ಒಳಗಾಗಿದ್ದ ಅಯೋಧ್ಯೆ ಇಂದು ಭೂಲೋಕದ ಸ್ವರ್ಗದಂತೆ ಕಂಗೊಳಿಸುತ್ತಿದೆ ಎಂದು ತಿಳಿಸಿದರು. ಪ್ರಧಾನಿಯವರು ಕನಸಿನಂತೆ ಅಯೋಧ್ಯೆಯಲ್ಲಿ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಮಾತನಾಡಿ, ಇಂದಿನ ಸಂಭ್ರಮಾಚರಣೆಯನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ನವ ಭಾರತ ನಿರ್ಮಾಣಕ್ಕೆ ಇಂದು ಸಾಂಕ್ಷಿಯಾಗಿದೆ. ರಾಮರಾಜ್ಯ ನಿರ್ಮಾಣಕ್ಕೆ ಎಲ್ಲರ ಭಾಗವಹಿಸುವಿಕೆ ಮುಖ್ಯವಾಗಿದೆ ಎಂದರು.

ಹಿಂದೂಸ್ತಾನ್ ಸಮಾಚಾರ್

You Might Also Like

ತೆಲಂಗಾಣದಲ್ಲಿ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಸ್ತುಗಳು ವಶ
Parliament Budget Session Day 6 disrupted as Lok Sabha adjourned amid protests
ಸದ್ಯಕ್ಕೆ 8ನೇ ವೇತನ ಆಯೋಗ ರಚನೆ ಇಲ್ಲ
ತಮಿಳುನಾಡಿನಲ್ಲಿ ಮುಂದುವರಿದ ಭಾರಿ ಮಳೆ 3ಸಾವು, ಯೆಲ್ಲೋ ಅಲರ್ಟ್
ನೂತನ ಶಿಕ್ಷಣ ನೀತಿ ಭಾರತದ ಬೌದ್ಧಿಕ ಪುನರುಜ್ಜೀವನ : ಪ್ರಧಾನಿ ಮೋದಿ | BulletsIn

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ಸಂಸದ ಪ್ರತಾಪ್ ಸಿಂಹಗೆ ಮುತ್ತಿಗೆ – Hindusthan Samachar Kannada
Next Article ನಡೆದಂತೆ ನುಡಿದವನು ಅಂಬಿಗರ ಚೌಡಯ್ಯ: ಮೇಯರ್ ಬಿ.ಶ್ವೇತ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?