ಅಯೋಧ್ಯೆ, 21 ಜನವರಿ(ಹಿ.ಸ):
ಆ್ಯಂಕರ್ :
ಅಯೋಧ್ಯೆ ಮಂದಿರದಲ್ಲಿ ಭಗವಾನ್ ಶ್ರೀರಾಮನ ಪ್ರತಿಷ್ಠಾಪನೆಗೆ ಕೆಲವೇ ಗಂಟೆಗಳು ಉಳಿದಿದ್ದು, ಇಡೀ ಅಯೋಧ್ಯೆಯು ಅಪೂರ್ವವಾದ ಭಕ್ತಿಯ ಉತ್ಸಾಹದಿಂದ ಪ್ರತಿಧ್ವನಿಸುತ್ತಿದೆ. ನಾಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸುವವರಿದ್ದು, ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಇಂದು ಪೂರ್ವ ಪ್ರಾಣ ಪ್ರತಿಷ್ಠಾ ಸಮಾರಂಭದ ವಿಧಿವಿಧಾನಗಳ ಕೊನೆಯ ದಿನವೂ ಆಗಿದೆ. ಭಗವಾನ್ ರಾಮನ ಕೃಪಾಕಟಾಕ್ಷಕ್ಕಾಗಿ ದೇಶ ವಿದೇಶಗಳ ಸಾವಿರಾರು ರಾಮಭಕ್ತರು ಶ್ರೀರಾಮನ ನಗರ ಅಯೋಧ್ಯೆ ತಲುಪಿದ್ದಾರೆ. ದೇವಾಲಯಗಳಲ್ಲಿ ಕೀರ್ತನೆ, ಭಜನೆ, ರಾಮಾಯಣ ಮತ್ತು ರಾಮಚರಿತಮಾನಗಳನ್ನು ನಿರಂತರವಾಗಿ ಪಠಿಸಲಾಗುತ್ತಿದೆ, ಪ್ರಸಾದ ವಿತರಣೆಗಳು ನಡೆಯುತ್ತಿವೆ ಮತ್ತು ರಸ್ತೆಗಳಲ್ಲಿ ಜನರು ಶ್ರೀರಾಮನನ್ನು ಜಪಿಸುತ್ತಿದ್ದಾರೆ. ಅಯೋಧ್ಯೆಯ ಗಡಿಯನ್ನು ನಿರ್ಬಂಧಿಸಲಾಗಿದ್ದು, ವಾಹನಗಳನ್ನು ಬೇರೆ ಮಾರ್ಗಗಳ ಕಡೆಗೆ ತಿರುಗಿಸಲಾಗಿದೆ. ಡ್ರೋನ್ಗಳಿಂದ ಪರಿವೀಕ್ಷಣೆ ನಡೆಸಲಾಗುತ್ತಿದೆ. ಅಯೋಧ್ಯೆಯ ಬೀದಿಗಳಲ್ಲಿ ಸಾವಿರಾರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ, ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಪೊಲೀಸ್ ಸಿಬ್ಬಂದಿ ರಾತ್ರಿಯಿಡೀ ಕಟ್ಟಡಗಳು ಮತ್ತು ಇತರ ಸ್ಥಳಗಳ ಶೋಧನೆ ನಡೆಸಿ ಅಯೋಧ್ಯೆಯ ಬೀದಿಗಳಲ್ಲಿ ಪಥ ಸಂಚಲನ ನಡೆಸಿದರು. ಇಂದು ಪೂರ್ವ ಪ್ರಾಣ ಪ್ರತಿಷ್ಠಾ ಸಮಾರಂಭದ ವಿಧಿವಿಧಾನಗಳ ಅಂತಿಮ ದಿನವಾಗಿದ್ದು, ವಿವಿಧ ಪವಿತ್ರ ನದಿಗಳು ಮತ್ತು ವಿವಿಧ ಜಲಮೂಲಗಳ ನೀರಿನಿಂದ ರಾಮಲಲ್ಲನ ಮಜ್ಜನ ನೆರವೇರಿಸಲಾಗುತ್ತದೆ. ಶಯ್ಯಾ ಅಧಿವಾಸ್, ಅಘೋರೆ ಹೋಮ್ ಮತ್ತು ರಾತ್ರಿ ಜಾಗರಣೆಯಂತಹ ಇತರ ಪ್ರಮುಖ ಆಚರಣೆಗಳು ವಾಸ್ತು ಶಾಂತಿ ನಡೆಯಲಿವೆ. . ನಿನ್ನೆ ದೇವಾಲಯದ ಆವರಣದಲ್ಲಿ ೮೧ ಕಲಶಗಳನ್ನು ಸ್ಥಾಪಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್
