ನವದೆಹಲಿ, 26 ಏಪ್ರಿಲ್ ಆ್ಯಂಕರ್:ರಾಜ್ಯದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು ಸಂಜೆ 6 ಗಂಟೆವರೆಗೂ ನಡೆಯಲಿದೆ. ಕರ್ನಾಟಕ ಮಾತ್ರವಲ್ಲ ವಿವಿಧ ರಾಜ್ಯಗಳಲ್ಲೂ ಇಂದು ಮತದಾನ ನಡೆಯುತ್ತಿದೆ.
ಒಟ್ಟು 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಇವತ್ತು 2ನೇ ಹಂತದಲ್ಲಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮತದಾನ ನಡೆಯಲಿದೆ.
ಯಾವ ರಾಜ್ಯಗಳಲ್ಲಿ ಮತದಾನ..?
ಕೇರಳದ ಎಲ್ಲ 20 ಕ್ಷೇತ್ರಗಳು, ರಾಜಸ್ಥಾನ 13 ಕ್ಷೇತ್ರಗಳು
ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದ ತಲಾ 9 ಕ್ಷೇತ್ರ
ಮಧ್ಯಪ್ರದೇಶ 7, ಬಿಹಾರ ಹಾಗೂ ಅಸ್ಸಾಂನ ತಲಾ 5 ಕ್ಷೇತ್ರ
ಛತ್ತೀಸ್ಗಢ, ಪಶ್ಚಿಮ ಬಂಗಾಳದ ತಲಾ 3 ಕ್ಷೇತ್ರಗಳು
ತ್ರಿಪುರ, ಜಮ್ಮು-ಕಾಶ್ಮೀರ, ಮಣಿಪುರದ ತಲಾ 1 ಕ್ಷೇತ್ರ
13 ರಾಜ್ಯಗಳ ಒಟ್ಟು 88 ಲೋಕಸಭೆ ಕ್ಷೇತ್ರಗಳಿಗೆ ಇವತ್ತು ಮತದಾನ ನಡೆಯುತ್ತಿದೆ. ರಾಹುಲ್ ಗಾಂಧಿ, ಶಶಿ ತರೂರ್, ಹೇಮಾ ಮಾಲೀನಿ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸೇರಿದಂತೆ ಘಟಾನುಘಟಿಗಳ ಭವಿಷ್ಯವನ್ನು ಇವತ್ತು ಮತದಾರ ಬರೆಯಲಿದ್ದಾನೆ. ಒಟ್ಟಾರೆ ಪ್ರಜಾಪ್ರಭುತ್ವದ ಹಬ್ಬಕ್ಕೆ ಸಕಲ ತಯಾರಿ ನಡೆದಿದ್ದು, ಜನರು ತಪ್ಪದೇ ತಮ್ಮ ಹಕ್ಕನ್ನ ಚಲಾಯಿಸಬೇಕಿದೆ.’
